ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಅತಿಯಾದ ಬೆನ್ನುನೋವು ಕಾಣಿಸಿಕೊಂಡಿದ್ದು ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ದಿಂಬು ಮತ್ತು ಹಾಸಿಗೆಯನ್ನು ನೀಡಲಾಗಿದೆ .
ಮಂಗಳವಾರ ಮೆಡಿಕಲ್ ರಿಪೋರ್ಟ್ ಬಂದ ನಂತರ ಜೈಲಿನ ಅಧಿಕಾರಿಗಳು ವೈದ್ಯರಿಗೆ ತಿಳಿಸಿರುವ ಕಾರಣ ಮೇಲಧಿಕಾರಿಗಳೊಂದಿಗೆ ಸಂವಾದ ನಡೆಸಿ ಇಂದು ಮೆಡಿಕಲ್ ದಿಂಬು ಮತ್ತು ಹಾಸಿಗೆಯನ್ನು ನೀಡಲಾಗಿದೆ.ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್‌ರವರು ಬೆಡ್ ಮತ್ತು ದಿಂಬನ್ನು ನೀಡುವಂತೆ ವರದಿಯಲ್ಲಿ ಬರೆದಿದ್ದರು,ಆದ್ದರಿಂದ ಅಂಬ್ಯುಲೆನ್ಸ್ ಮೂಲಕ ಜೈಲಿಗೆ ಕಳುಹಿಸಲಾಗಿದ್ದು ಆರೋಗ್ಯ ಇಲಾಖೆ ಸಿಬ್ಬಂದಿಗಳ ತಪಾಸಣೆಯ ನಂತರ ಕೊಡಲಾಗಿದೆ ಎಂದು ತಿಳಿದುಬಂದಿದೆ.