ಮೈಸೂರು: ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆ ಮಾಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಪತ್ರವನ್ನು ಬರೆದು ಮನವಿಯನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಡಾ ಹಗರಣದ ಆರೋಪದಲ್ಲಿರುವ ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆಗೆ ಒಳಪಡಿಸುವಂತೆ ಮನವಿಯನ್ನು ಸಲ್ಲಿಕೆ ಮಾಡಲು ಅಕ್ಟೋಬರ್ 10ರಂದು ಲೋಕಾಯುಕ್ತ ಕಛೇರಿಗೆ ಸ್ನೇಹಮಯಿ ಕೃಷ್ಣರವರು ಭೇಟಿ ನೀಡಿದ್ದರು.
ಲೋಕಾಯುಕ್ತ ಆಫೀಸಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆ ಮಾಡಿ, ಇಲ್ಲದಿದ್ದರೆ ಅವರ, ಹಗರಣಕ್ಕೆ ಸಂಬಂಧಿಸಿದಂತಹ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಗಳಿವೆ, ತಾವು ಭೇಟಿ ನೀಡುವ ಕಾರ್ಯಕ್ರಮದ ಭಾಷಣದ ವೇಳೆಯಲ್ಲಿ ಹಗರಣದ ದಿಕ್ಕನ್ನು ಬೇರೆಡೆಗೆ ತಿರುಗಿಸಿ ಜನರ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲು ಗಿಮಿಕ್ ಮಾಡುವುದರ ಜೊತೆಗೆ ಪ್ರಚೋದನೆಯ ಭಾಷಣವನ್ನು ಮಾಡುತ್ತಿದ್ದಾರೆ ಆದ್ದರಿಂದ ವಿಚಾರಣೆಗೆ ಒಳಪಡಿಸಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.