ಕೊಪ್ಪಳ: ಸಿಎಂ ಸಿದ್ದರಾಮಯ್ಯನವರ ಕಾನ್ವೆಗೆ ಅಡ್ಡವಾಗಿ ಒನ್ವೇ ಮಾರ್ಗದಲ್ಲಿ ಕಾರು ಚಲಾಯಿಸಿದ ಶಾಸಕ ಜನಾರ್ಧನ ರೆಡ್ಡಿಯವರ ಡೃೈವರ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯನವರ ಕಾರು ಚಲಿಸುವ ವೇಳೆ ನಿಯಮವನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಶಾಸಕ ಜನಾರ್ಧನ ರೆಡ್ಡಿಯವರ ಕಾರನ್ನು ಜಪ್ತಿ ಮಾಡಿ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ನಿಯಮ ಉಲ್ಲಂಘನೆ ಮಾಡಿದ ಆರೋಪಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಗಂಗಾವತಿಯ ಮಾರ್ಗದಿಂದ ಬಳ್ಳಾರಿಗೆ ಹೋಗುವ ಸಮಯದಲ್ಲಿ ವಾಹನಗಳ ನಿರ್ಬಂಧವಿದ್ದರೂ ಕೂಡಾ ನಿಯಮವನ್ನು ಉಲ್ಲಂಘಿಸಿ ಸಿಎಂ ಹಿಂಬಾಲಕರ ವಾಹನಗಳೆದುರು ಕಾರು ಚಲಾಯಿಸಿರುವ ದೃಶ್ಯ ಸೆರೆಯಾಗಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.