ಹುಬ್ಬಳ್ಳಿ: ಮುಡಾ ಹಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಗೃಹ ಸಚಿವರಾದ ಜಿ.ಪರಮೇಶ್ವರ್ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ತಿರುಗೇಟನ್ನು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಮಂತ್ರಿಗಳು, ಪ್ರತಿಪಕ್ಷದವರು ಮುಡಾ ಸ್ಕಾಮ್ ವಿಚಾರವನ್ನಿಟ್ಟುಕೊಂಡು ರಾಜಕೀಯ ಮಾಡುತ್ತೀವೆ. ಈ ಪ್ರಕರಣವೂ ಈಗಾಗಲೇ ದಾಖಲಾಗಿದ್ದು ತನಿಖೆ ನಡೆಸಲು ಅವಕಾಶವನ್ನು ನೀಡುವುದರ ಬದಲಾಗಿ ಅದನ್ನಿಟ್ಟುಕೊಂಡು ರಾಜಕೀಯ ಮಾಡುವುದಲ್ಲವೆಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರ ಮಾಡುವ ವೇಳೆ ಭಾಷಣಗಳಲ್ಲಿ ಮುಡಾ ವಿಷಯವನ್ನು ಪ್ರಸ್ಥಾಪಿಸುವುದರ ಅಗತ್ಯವೆನಿದೆ ?ಎಂದು ಪ್ರಶ್ನಿಸಿ, ಪ್ರಧಾನಿಯವರ ವಿರುದ್ದ ಕಿಡಿಕಾರಿದ್ದಾರೆ.
ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ.ಪ್ರತಿಪಕ್ಷದವರು ಸಲಹೆ ಸೂಚನೆಗಳನ್ನು ನೀಡಬೇಕು ಅದನ್ನು ಬಿಟ್ಟು ದ್ವೇಷ ರಾಜಕಾರಣ ಮಾಡುವುದಲ್ಲ. ಮುಡಾ ವಿಚಾರದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ.ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುತ್ತಾರೆಯೇ ಎಂಬ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಆರ್‌ಅಶೋಕ್ ಮೊದಲು ರಾಜೀನಾಮೆ ನೀಡಲಿ, ನಂತರ ಈ ವಿಷಯದ ಕುರಿತು ಚರ್ಚಿಸೋಣ ಎಂದಿದ್ದಾರೆ.