ಪ್ರತಿವಾರದ ಧಾರವಾಹಿಗಳ ಟಿಆರ್‌ಪಿಯು ವಾರ ವಾರಕ್ಕೆ ಬದಲಾಗುತ್ತಿರುತ್ತದೆ.ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಧಾರವಾಹಿಗಳು ಮೊದಲ ಸ್ಥಾನವನ್ನು ಪಡೆದುಕೊಂಡ ಧಾರವಾಹಿಜನರನ್ನು ಹಿಡಿದಿಟ್ಟುಕೊಂಡು ತನ್ನ ಸ್ಥಾನವನ್ನು ಕಾದುಕೊಂಡಿರುತ್ತದೆ. ಇದೀಗ 39 ನೇ ವಾರದ ಟಿಆರ್‌ಪಿಯನ್ನು ನೋಡುವಾಗ ಅಚ್ಚರಿಯ ಬೆಳವಣಿಗೆ ಕಂಡಿದೆ. ಬನ್ನಿ ಟಾಪ್ 5 ದಾರಾವಾಹಿಗಳನ್ನ ತಿಳಿಯೋಣ.
ಅಮೃತಧಾರೆ ಧಾರವಾಹಿಯು ನಂಬರ್ 1 ಸ್ಥಾನದಲ್ಲಿದೆ.ಈ ಧಾರವಾಹಿಯು ಆರಂಭದ ದಿನಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕು ಟಿಆರ್‌ಪಿಯೂ ಇತ್ತು. ಕ್ರಮೇಣ ದಿನಗಳು ಕಳೆಯುತ್ತಾ ಏರಿಳಿತವನ್ನು ಕಂಡಿತ್ತು. ಆದರೀಗ ಮೊದಲನೆ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಆಶ್ಚರ್ಯವನ್ನುಂಟು ಮಾಡಿದೆ ಎನ್ನಲಾಗುತ್ತಿದೆ.
ʼಲಕ್ಷ್ಮೀ ನಿವಾಸʼ ಧಾರವಾಹಿಯು ಎರಡನೆ ಸ್ಥಾನ ಪಡೆದುಕೊಂಡಿದ್ದು , ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಮೂರನೇ ಸ್ಥಾನವನ್ನುʼ ಶ್ರಾವಣಿ ಸುಬ್ರಮಣ್ಯʼ ಧಾರವಾಹಿಯು ಪಡೆದುಕೊಂಡಿದ್ದು ಪ್ರತಿದಿನವೂ ತಿರುವುಗಳನ್ನು ಪಡೆದುಕೊಂಡು ಪ್ರೇಕ್ಷರಿಗೆ ಅಚ್ಚರಿ ಮೂಡಿಸುತಿದೆ. ʼಪುಟ್ಟಕ್ಕನ ಮಕ್ಕಳುʼ ಧಾರವಾಹಿಯುನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ʼಲಕ್ಷ್ಮೀಬಾರಮ್ಮʼ ಧಾರವಾಹಿಯೂ ಐದನೇ ಸ್ಥಾನ ಪಡೆದುಕೊಂಡು ಪ್ರೇಕ್ಷಕರನ್ನು ರಂಜಿಸುತ್ತೀವೆ.
ಇತ್ತೀಚೆಗೆ ಪ್ರಾರಂಭವಾದ ʼಅಣ್ಣಯ್ಯʼ ಧಾರವಾಹಿಯೂ ಹೆಚ್ಚು ಟಿಆರ್‌ಪಿಯನ್ನು ಪಡೆಯದೇ ಇರುವುದು ಬೇಸರದ ಸಂಗತಿ. ಇನ್ನೂ, ಬಿಗ್‌ಬಾಸ್ 11 ಶುರುವಾಗಿದ್ದು ಎಲ್ಲಾ ಧಾರವಾಹಿಗಳ ಟಿಆರ್‌ಪಿಯನ್ನು ಹಿಂದಿಕ್ಕುವ ಎಲ್ಲಾ ಲಕ್ಷಣಗಳಿವೆ ಎನ್ನಲಾಗಿದೆ.