ರಾಮನಗರ: ಚನ್ನಪಟ್ಟಣ ಕ್ಷೇತ್ರಕ್ಕೆ ಹೊಸದೊಂದು ರೂಪವನ್ನು ನೀಡುತ್ತೇವೆ, ಅದಕ್ಕಾಗಿಈ ಕ್ಷೇತ್ರಕ್ಕೆ 300 ಕೋಟಿ ರೂ. ಹಣವನ್ನು ಸ್ಯಾಂಕ್ಷನ್ ಮಾಡಿಸಿದ್ದೇನೆ. ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
20 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಕಳಿಯಲ್ಲಿರುವ ಮನೆಗಳ ನಿರ್ಮಾಣಕ್ಕೆ 2.16 ಕೋಟಿ ರೂಗಳನ್ನು ಅನುದಾನವಾಗಿ ನೀಡಿದ್ದೇನೆ, ಸಿಎಸ್ ಆರ್ ಫಂಡ್‌ನಿಂದ ಒಳ್ಳೆಯ ಶಾಲೆಯನ್ನು ನಿರ್ಮಿಸಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ದಿಯ ಕಾರ್ಯಗಳನ್ನು ಮಾಡುವುದಕ್ಕೆ ಹೆಚ್ಚೆಚ್ಚು ಶಕ್ತಿ ಬೇಕು ಸ್ಪೂರ್ತಿ ಬೇಕು. ನಾನು ನಿಮ್ಮ ಕ್ಷೇತ್ರಕ್ಕೆ ಉಸ್ತುವಾರಿ ಸಚಿವನಾಗಿ 20 ಬಾರಿ ಭೇಟಿ ನೀಡಿದ್ದೇನೆ. ಅದೇ ನಿಮ್ಮ ಕ್ಷೇತ್ರದ ಶಾಸಕರುಗಳೇನಾದರೂ 20 ಬಾರಿ ಭೇಟಿ ನೀಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ .
ಅದೇ ವೇಳೆಯಲ್ಲಿ ಖಾಲಿಯಿರುವ ಕೆರೆಯ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಅದನ್ನು ನಾವು ಅಂದರೆ ಕಾಂಗ್ರೆಸ್ಸಿನವರು ಮಾತ್ರ ಸರಿಮಾಡಲು ಸಾದ್ಯ. ಬಿಜೆಪಿ ಮತ್ತು ಜೆಡಿಎಸ್‌ನವರಿಂದ ಸಾದ್ಯವಿಲ್ಲವೆಂದಿದ್ದಾರೆ.