ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿರುವ ದರ್ಶನ್‌ಗೆ ಮತ್ತೆ ಸಂಕಷ್ಟ. ಜಾಮೀನು ವಿಚಾರಣೆಯ ಡೇಟನ್ನು ಮುಂದೂಡಿದ ಕೋರ್ಟ್.
ನಟ ದರ್ಶನ್ ಸಲ್ಲಿಸಿರುವ ಜಾಮೀನಿನ ಅರ್ಜಿಯ ವಿಚಾರಣೆಯನ್ನು ನಡೆಸಿದ ನಗರದ(ಬೆಂಗಳೂರಿನ) 57ನೇಸಿಸಿಎಚ್ ಕೋರ್ಟ್ , ದರ್ಶನ್ ಪರ ವಾದ ಮಂಡನೆಯನ್ನು ಆಲಿಸಿದ ನಂತರ ನಾಳೆ ಮಧ್ಯಾಹ್ನ 12.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡುವುದರ ಮೂಲಕ ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ.
ಇವತ್ತಾದರೂ ಜಾಮೀನು ಸಿಗುತ್ತದೆಂಬ ವಿಶ್ವಾಸದಲ್ಲಿದ್ದ ನಟ ದರ್ಶನ್‌ರವರಿಗೆ ನಿರಾಶೆಯುಂಟಾಗಿ ಮತ್ತೆ ಜೈಲಿನಲ್ಲೇ ಇರುವಂತಹ ಪರಿಸ್ಥಿತಿಯಾಗಿದೆ.