ಬೆಂಗಳೂರು: ಫೇಸ್‌ಲೇಸ್‌ , ಸಂಪರ್ಕ ರಹಿತ ಹಾಗೂ ಆನ್‌ಲೈನ್‌ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಇಂದಿನಿಂದ ಆರಂಭಿಸಲಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

> ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಕರಡು 2- www.bbmpeaasthi.karnataka.gov.in ರಚಿಸಿ, ಇರಿಸಲಾಗಿದೆ.

> ನಾಗರಿಕರು ತಮ್ಮ ಸ್ವತ್ತಿನ ಕರಡು ಇ- ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

> ಅಂತಿಮ ಇ-ಖಾತಾವನ್ನು ಪಡೆಯಲು ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್‌ ದತ್ತಾಂಶ, ಛಾಯಾಚಿತ್ರ, ಸ್ವತ್ತಿನ ನೋಂದಾಯಿತ ದಸ್ತಾವೇಜು, 2004ರ ಏಪ್ರಿಲ್ 1ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇ.ಸಿ), ಬೆಸ್ಕಾಂ ಮೀಟರ್ ಸಂಖ್ಯೆ ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎನ್ನುವ ಮಾಹಿತಿಗಳನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *