ಬೆಂಗಳೂರು: ಕಾವೇರಿ ಆರತಿಯನ್ನು ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ದ ವಿಪಕ್ಷ ನಾಯಕರಾದ ಆರ್.ಅಶೋಕ್‌ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.

ಕಾಶಿಯಲ್ಲಿ ನಡೆಯುತ್ತಿರುವ ಗಂಗಾ ಆರತಿಯ ರೀತಿಯಲ್ಲಿ ಕಾವೇರಿ ಆರತಿ ಮಾಡುವ ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಆರ್‌ ಅಶೋಕ್‌ ತೋರಿಕೆಗಾಗಿ ಆರತಿಯ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾದ್ದಾರೆ.

ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ 30 ವರ್ಷದ ಹಳೇ ಕೇಸುಗಳನ್ನು ರೀ ಒಪನ್‌ ಮಾಡಿದ ಕಾಂಗ್ರೆಸ್‌ , ನಾಗಮಂಗಲದಲ್ಲಿ ನಡೆದಿರುವಂತಹ ಗಲಭೆಯನ್ನು ಇದೊಂದು ಸಣ್ಣ ಗಲಾಟೆ, ಬೇಕು ಎಂದು ಮಾಡಿದ್ದಲ್ಲವೆಂದು ತಿಪ್ಪೆ ಸಾರಿಸಿದ ಸರ್ಕಾರ ಹಿಂದೂ ಧರ್ಮದ ಅಚಾರ-ವಿಚಾರದ ಬಗ್ಗೆ ಇಷ್ಟೊಂದು ಆಸಕ್ತಿ ತೋರುತ್ತಿರುವುದು ಕೇವಲ ತೋರಿಕೆಗಾಗಿ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *