ಮೈಸೂರು: ವಿಜಯನಗರದಲ್ಲಿರುವ ಮುಡಾ ನಿವೇಶನದಲ್ಲಿ  ಸಿಎಂ ಸಿದ್ದರಾಮಯ್ಯನವರು ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿಯವರು ಮಾಡಿರುವ ಆರೋಪಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿರುಗೇಟನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ʼಹಿಟ್ ಅಂಡ್ ರನ್ʼ ಹೇಳಿಕೆಗಳನ್ನು ನೀಡುತ್ತಾ ಫೇಮಸ್‌ ಆದವರು. ‘ಸಿದ್ದರಾಮಯ್ಯನವರ ಮುಡಾ ಹಗರಣವನ್ನು ಸಾಬೀತು ಮಾಡಿದರೆ ಸಿಎಂ ಸಿದ್ದರಾಮಯ್ಯ  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ, ಆದರೆ ಸಿದ್ದರಾಮಯ್ಯನವರ ಮೇಲಿರುವ ಆರೋಪ ಸುಳ್ಳು ಎಂದು  ಸಾಬೀತಾದರೆ ಕುಮಾರಸ್ವಾಮಿಯವರೇ ನೀವು  ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯನವರ  ವಿರುದ್ಧ ಇಲ್ಲಸಲ್ಲದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡುವುದನ್ನು ನೀಲ್ಲಿಸಬೇಕು. ಅದೇ ರೀತಿ ಸುಳ್ಳು ಮಾಹಿತಿಯನ್ನು ನೀಡಿದರೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *