ಬೆಂಗಳೂರು: ಪೊಲೀಸ್ ವಿಚಾರಣೆಯ ವೇಳೆ ರೇಣುಕಾಸ್ವಾಮಿಗೆ ಹೇಗೆಲ್ಲಾ ಹಿಂಸೆ ನೀಡಿದ್ದೇನೆ ಎಂದು ಸ್ವತಃ ದರ್ಶನ್ರವರೇ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾದ ನಂತರ ಆರೋಪಿಗಳು ಯಾವ ರೀತಿ ಹಿಂಸೆ ನೀಡಿದ್ದಾರೆಂಬ ಕೆಲವು ಪೋಟೋಗಳು ಕೂಡಾ ವೈರಲ್ ಆಗಿದ್ದವು.ಇದೀಗ ದರ್ಶನ್ರವರು ರೇಣುಕಾಸ್ವಾಮಿಯನ್ನು ಸಿನಿಮಾ ಸ್ಟೈಲಿನಲ್ಲಿ ಕುತ್ತಿಗೆಯ ಮೇಲೆ ಕಾಲಿಟ್ಟು ಹಿಂಸೆ ಮಾಡಿದ್ದೇ. ಎನ್ನುವ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಮಾಡಿರುವ ಕೃತ್ಯಗಳು ಚಾರ್ಜ್ಶೀಟಿನಲ್ಲಿ ಬಯಲಾಗಿದ್ದು ವಿಚಾರಣೆಯ ವೇಳೆ 20 ಪುಟಗಳಷ್ಟು ತಪ್ಪೊಪ್ಪಿಗೆ ಹೇಳಿಕೆ ದಾಖಲು ಮಾಡಿದ್ದಾರೆ ಮತ್ತು ಜಾಮೀನಿಗೆ ಅರ್ಜಿಯನ್ನು ಹಾಕುವ ಸಾದ್ಯತೆಗಳಿವೆ ಎನ್ನುವುದು ಬೆಳಕಿಗೆ ಬಂದಿದೆ .