ಬೆಂಗಳೂರು: ನಟ ದರ್ಶನ್ ಗೆ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿರುವ ಪೋಟೋ, ವೀಡಿಯೋ ವೈರಲ್ ಆದ ಬೆನ್ನಲ್ಲೇ ಕೆಲವು ಜೈಲಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೈಲಿನ ಅಧಿಕಾರಿಗಳೇ ನಟ ದರ್ಶನ್ ಮತ್ತು ಇತರರಿಗೆ ಬೇಕಾದ ಸೌಲಭ್ಯಗಳನ್ನು ಸಪ್ಲೈ ಮಾಡಿದ್ದಾರೆ ಎನ್ನುವುದು ತನಿಖೆಯ ವರದಿಯಿಂದ ತಿಳಿದುಬಂದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಪ್ರಕರಣದ ಕುರಿತು ತನಿಖೆ ನಡೆಸಲು ಸರ್ಕಾರವೂ ಆದೇಶವನ್ನು ನೀಡಿತ್ತು. ಸರ್ಕಾರದ ಆದೇಶದಂತೆ ತನಿಖಾಧಿಕಾರಿಗಳ ತಂಡವು ಆರೋಪಿಗಳಿರುವ ಪರಪ್ಪನ ಅಗ್ರಹಾರ ಜೈಲಿನ ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಿದ್ದರು. ಈ ತನಿಖೆಯಲ್ಲಿ ತಿಳಿದುಬಂದಿರುವ ವಿಷಯವೆನೆಂದರೆ ಜೈಲಿನ ಅಧಿಕಾರಿ, ಮತ್ತು ಸಿಬ್ಬಂದಿಗಳೇ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವಿಷಯ ತಿಳಿದುಬಂದಿದೆ.
ಪರಪ್ಪನ ಅಗ್ರಹಾರದ ಜೈಲಿನ ಸಿಬ್ಬಂದಿಗಳೇ ಆರೋಪಿಗಳು ಕುಳಿತುಕೊಳ್ಳಲು ಚೇರ್,ಡೇಬಲ್, ಮಗ್, ಮತ್ತು ಟೀಯನ್ನು ಸಪ್ಲೈ ಮಾಡಿದ್ದಾರೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಈ ವರದಿಯನುಸಾರ ಜೈಲಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.