ಬೆಂಗಳೂರು: ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಚ ಮಾಡಿದರೆ ಏನು ತಪ್ಪು? ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆಯಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯ ಕ್ಲೀನ್‌ ಮಾಡಿದ್ರೆ ತಪ್ಪೇನು? ಜಪಾನಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ಲೀನ್‌ ಮಾಡ್ತಾರೆ ,ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಹಾಸ್ಟೆಲ್‌ ನ್ನು ಗುಡಿಸಿ ಸ್ವಚ್ಚ ಮಾಡುತ್ತಿದ್ದೆ ಎಂದಿದ್ದಾರೆ.

ವಿದ್ಯಾರ್ಥಿಗಳು ಶೌಚವನ್ನು ಕ್ಲೀನ್‌ ಮಾಡುತ್ತಿರುವ ವಿಡಿಯೋವನ್ನು ನೋಡಿದ್ದೆನೆ,ಈ ಘಟನೆಗೆ ಸಂಬಂಧಪಟ್ಟ ಶಿಕ್ಷಕರ ವಿರುದ್ದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ವಿದ್ಯಾರ್ಥಿಗಳು ಶೌಚ ಕ್ಲೀನ್‌ ಮಾಡಿರುವುದೇ ದೊಡ್ಡ ಅಪರಾಧ. ಪೊರಕೆ ಹಿಡಿದು ಸ್ವಚ್ಚಮಾಡುವುದುಕೀಳು ಎನ್ನುವ ಭಾವನೆ ಮಕ್ಕಳ ಮನಸ್ಸಲ್ಲಿ ಮೂಡುವಂತೆ ಮಾಡಲಾಗುತ್ತಿದೆ ಎಂದಿದ್ದಾರೆ.

ಯಾವುದೇ ಕೆಲಸ ಮಾಡುವುದು ಕೀಳಲ್ಲ. ಬದಲಾಗಿ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *