ಬೆಂಗಳೂರು: ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿದ ಸರ್ಕಾರದ ನಡೆಯನ್ನು ಪ್ರಶ್ನಿಸಿ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ..
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾತನಾಡಿದ ಅವರು, ಉತ್ತಮ ಶಿಕ್ಷಕರ ಆಯ್ಕೆಯ ವಿಚಾರದಲ್ಲಿ ಸರಕಾರಕ್ಕೆ ದೂರು ನೀಡಿದವರು ಯಾರು? ಎಸ್‍ಡಿ.ಪಿಐನವರು ದೂರು ಕೊಟ್ಟಿದ್ದಾರೆ ಎನ್ನುವ ನೀವು ಅವರ ನಿರ್ಧಾರದಂತೆಯೇ ಸರ್ಕಾರ ನಡೆಯುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಯಾರನ್ನೋ ಸಮಾಧಾನ ಮಾಡಲು ಮತ್ಯಾರಿಗೋ ಅನ್ಯಾಯ ಮಾಡುವುದು ಸರಿಯಲ್ಲ, ಮಕ್ಕಳು ಅಕ್ಷರ ಕಲಿಯುವ ಶಾಲೆಗಳು ಪವಿತ್ರ ಸ್ಥಳಗಳು. ಮಕ್ಕಳ ಮನಸ್ಸಿನಲ್ಲಿ ದ್ವೇಷ ಹುಟ್ಟಿಸುವ ಕೆಲಸ ಸರಿಯಿಲ್ಲ ಎಂದಿದ್ದಾರೆ.