ಬೆಂಗಳೂರು: ಇತ್ತೀಚೆಗೆ ಚಲನಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದ್ದು ಮಾಲಿವುಡ್ ಸಿನಿಮಾರಂಗದಲ್ಲಿ ನ ಹೇಮಾ ಸಮಿತಿ ವರದಿಯ ನಂತರ ಕೆಲ ಕಲಾವಿದರು ಕೆಲ ಕಲಾವಿದರ ವಿರುದ್ಧ ದೂರನ್ನು ದಾಖಲಿಸಿರುವುದು ತಿಳಿದುಬಂದಿದೆ.
ಬೇರೆ ಭಾಷೆಯ ಚಿತ್ರರಂಗದಲ್ಲಿ ನಡೆಯುತ್ತಿರುವಂತೆ ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಇನ್ನಿತರ ಸಮಸ್ಯೆಗಳನ್ನೆಲ್ಲಾ ಅಧ್ಯನವ ಮಾಡಿ ವರದಿಯನ್ನು ಸಲ್ಲಿಸಲು ಸಮಿತಿ ರಚನೆಯಾಗಬೇಕೆಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(ಫೈರ್) ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದರ ಮೂಲಕ ಆಗ್ರಹಿಸಿದೆ ಎನ್ನಲಾಗಿದೆ.