ಬೆಂಗಳೂರು: ಮುಡಾ ಹಗರಣ ನಡೆದಿಲ್ಲ ಎಂದು ವಾದ ಮಾಡುವವರು ಯಾಕೆ ಹಿಂದಿನ ಕಮಿಷನರ್ ರನ್ನು ಅಮಾನತು ಮಾಡಿದ್ದು? ಇದರಿಂದನೇ ಸ್ಪಷ್ಟವಾಗುತ್ತದೆ ಮುಡಾದಲ್ಲಿ ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯವರನ್ನು ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ದೊಡ್ಡ ಹಗರಣ ನಡೆದಿದ್ದು ಹೆಡ್ ಮಾಸ್ಟರ್ ಆದ ಸಿದ್ದರಾಮಯ್ಯನವರು ಸಿಕ್ಕಿಹಾಕಿಕೊಂಡಿದ್ದಾರೆ.ವಿವರಣೆ ನೀಡಲೆಂದು ಮುಡಾ ಅಧಿಕಾರಿ ಎರಡು ಬಾರಿ ಕರೆದರೂ ಹಾಜರಾಗದೆ ಆ ಅಧಿಕಾರಿಯನ್ನೆ ಅಮಾನತು ಮಾಡಿದ್ದೀರಾ?. ಮುಡಾ ಹಗರಣದಲ್ಲಿ ತಮ್ಮದು ಯಾವ ಪಾತ್ರವೂ ಇಲ್ಲವೆಂದಾದಲ್ಲಿ ಆ ಅಧಿಕಾರಿಯನ್ನು ಯಾಕೆ ಅಮಾನತು ಮಾಡಿದ್ದೀರಿ ಎಂದು ವಾಕ್ಸಮರ ನಡೆಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ರಾಜ್ಯಪಾಲರ ವಿರುದ್ದ ಮಾತನಾಡ್ತಾರೆ. ಮುಡಾ ಹಗರಣ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಎಲ್ಲವನ್ನೂ ಕೋರ್ಟ್ ಪರಿಶೀಲನೆ ಮಾಡಿ ಜನರ ಹಣ ಉಳಿಸುವ ಕೆಲಸ ಮಾಡುತ್ತದೆ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ.