ಹಾವೇರಿ: ಬ್ರೀಟಿಷರಿಗೆ ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹೇಗೆ ಹಿಡಿದುಕೊಟ್ಟರೂ, ಹಾಗೆ ನಮ್ಮ ಸುತ್ತಮುತ್ತಲೂ ಶತ್ರುಗಳಿದ್ದಾರೆ ಅದು ನಮಗೆ ಗೊತ್ತಾಗುವುದಿಲ್ಲವೆಂದು ಸಿದ್ದರಾಮಯ್ಯನವರ ಜೊತೆಯಲಿದ್ದಕೊಂಡೇ ಅವರ ವಿರುದ್ಧ ತಂತ್ರವನ್ನು ಮಾಡುತ್ತಿರುವವರಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟನ್ನು ಕೊಟ್ಟಿದ್ದಾರೆ.
ಹಾಸನದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯ ಅಂದಮೇಲೆ ಶತ್ರುಗಳಿರುವುದು ಕಾಮನ್, ಆದರೆ ನಮ್ಮ ಜೊತೆಯಲ್ಲೇ ಇದ್ದುಕೊಂಡು ನಮಗೆ ಕತ್ತಿ ಮಸೆಯುತ್ತಿರುತ್ತಾರೆ, ಯಾರು ನಿಜವಾದ ಸ್ನೇಹಿತರು? ಯಾರು ಶತ್ರುಗಳು ಎಂಬುದು ತಿಳಿಯುವುದಿಲ್ಲ ಎಂದು ಸ್ವಪಕ್ಷೀಯ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.
ದರ್ಶನ್ ರಾಜಾತಿಥ್ಯ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎನ್ನುವ ಪ್ರಶ್ನೆಗೆ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕು ಹಾಕಿ ಪ್ರಸಾರ ಮಾಡುತ್ತಿರುವ ಕಾರಣ ನನ್ನ ಹೆಸರಿದೆ ಅಷ್ಟೇ, ನಾನು ದರ್ಶನ್ ಆತ್ಮೀಯ ಸ್ನೇಹಿತರು, ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲು ಸೇರಿದ್ದಾರೆ. ಎಂದು ಉತ್ತರಿಸಿದ್ದಾರೆ.