ದೊಡ್ಡವರಿಂದ  ಹಿಡಿದು ಚಿಕ್ಕಮಕ್ಕಳವರೆಗೂ ಕೂದಲಿನ ಮೇಲೆ ಹೆಚ್ಚು ಕಾಳಜಿಯಿರುತ್ತದೆ. ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ತೆಳ್ಳಗಿದ್ದರೆ ಏನೋ ಕೊರತೆಯಿರುವ ಹಾಗೆ ಭಾಸವಾಗುತ್ತದೆ. ಆಗ  ಬೇಜಾರಾಗಿ ಚಂದ ಕಾಣುವ ಆಸೆಯನ್ನು ಕೈಬಿಡಲು ತಯಾರಾಗಿರುತ್ತಾರೆ ಆತ್ಮವಿಶ್ವಾಸವನ್ನುಕುಗ್ಗಿಸುತ್ತದೆ ಈ ಕೂದಲಿನ ಸಮಸ್ಯೆ.

ಈ ಕೂದಲು ಉದುರುವ ಸಮಸ್ಯೆಯು ಎಲ್ಲಾ ವಯೋಮಾನದವರಲ್ಲೂ ಕಂಡುಬರುವ ಸಾಮಾನ್ಯವಾದ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಕಾರಣಗಳೇನು? ಯಾವ ಆಹಾರವನ್ನು ಸೇವಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ? ಮತ್ತು ಈ ಸಮಸ್ಯೆಗೆ ಯಾವೆಲ್ಲಾ ಆಹಾರ ಪದಾರ್ಥಗಳು ಕಾರಣವಾಗಿವೆ ಎಂಬುದನ್ನು ತಿಳಿಯೋಣ.

ಸೊಂಪಾದ ಕೂದಲಿನ ಬೆಳವಣಿಗೆಗೆ ಮೊಟ್ಟೆಯೂ ತುಂಬಾ ಸಹಕಾರಿಯಾಗಿದೆ. ಮೊಟ್ಟೆಯಲ್ಲು ಹಲವಾರು ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್‌ ಎ.ಡಿ. ಇರುವುದರಿಂದ ಮೊಟ್ಟೆಯೂ ಕೂದಲಿನ ಬೆಳವಣಿಗೆಗೆ ತುಂಬಾ ಉಪಕಾರಿಯಾಗಿದೆ.

ಸೊಪ್ಪು: ಸರ್ವರೋಗಕ್ಕೂ ಸೊಪ್ಪು ಮದ್ದು ಎನ್ನುವ ಹೊಸ ಗಾದೆಯಲ್ಲಿ ಈಗಿನ ಆಧುನಿಕ ಶೈಲಿಯ ಜೀವನದಲ್ಲಿ ಅಳವಡಿಸಿಕೊಂಡರೆ ತಪ್ಪಾಗಲಾರದು. ಸೊಪ್ಪಿನಲ್ಲಿ ಪೊಟ್ಯಾಸಿಯಂ, ವಿಟಮಿನ್‌ ಎ.ಸಿ. ಅಧಿಕವಾಗಿರುವುದರಿಂದ ಕೂದಲನ್ನು ಬುಡದಿಂದಲೇ ಸದೃಡವಾಗುವಂತೆ ಮಾಡುತ್ತದೆ.

ಪ್ರತಿದಿನ ಒಂದು ಕ್ಯಾರಟ್‌ ಸೇವಿಸುವುದರಿಂದ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಕೂದಲಿನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ.

ನಿಂಬೆ, ಮೂಸಂಬಿ, ಆರೆಂಜ್.‌ ಬಟರ್‌ ಪ್ರೂಟ್‌, ಈ ರೀತಿಯ ಹಣ್ಣುಗಳಲ್ಲಿ ವಿಟಮಿನ್‌ ಸಿ ಯಥೇಚ್ಚವಾಗಿರುವುದರಿಂದ ಈ ಹಣ್ಣುಗಳನ್ನು  ಸೇವನೆ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ದ್ರಾಕ್ಷಿ-ಗೋಡಂಬಿ, ಬಾದಾಮಿ, ಯಂತಹ ಡ್ರೈಫ್ರೂಟ್‌ಗಳಲ್ಲಿ ಕೊಬ್ಬಿನಂಶ ಹೆಚ್ಚಿರುವ ಕಾರಣ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಖಾಲಿ ಹೊಟ್ಟೆಯಲ್ಲಿ  ಕರಿಬೇವನ್ನು ಸೇವಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಯಾವೆಲ್ಲಾ ಆಹಾರಗಳಿಂದ ಕೂದಲ ಬೆಳವಣಿಗೆಗೆ ಸಹಕರಿಸುವುದಿಲ್ಲ  ಎಂಬುದನ್ನು ತಿಳಿಯೋಣ.

ಕೆಲವು ರೀತಿಯ ಮೀನುಗಳನ್ನು ಸೇವನೆ ಮಾಡುವುದರಿಂದ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಏಕೆಂದರೆ ಆ ಮೀನುಗಳಲ್ಲಿ ಪಾದರಸದಂತಹ ಅಂಶ ಹೆಚ್ಚಾಗಿರುವುದರಿಂದ

ಉದಾ: ಶಾರ್ಕ್‌, ಬಾಂಗಡ,ಭೂತಾಯ್……‌

ಇತ್ತೀಚೆಗಂತೂ ಹೊರಗಿನ ಆಹಾರದ ಕಡೆ ಹೆಚ್ಚು ಒಲವಿರುವುದರಿಂದ ಈ ಜಂಕ್‌ ಫುಡ್‌ ಸೇವನೆಯೂ ಕೂಡಾ ಕೂದಲ ಸಮಸ್ಯೆಗೆ ಕಾರಣವಾಗಿರುತ್ತದೆ.

ಸಕ್ಕರೆಯ ಸೇವನೆ ಅತಿಯಾದರೆ ಅದು ಕೂಡಾ ನಮ್ಮ ಕೂಸಲಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ಕೂದಲು ಉದುರುವ ಹಾಗೆ ಆಗುತ್ತದೆ.

ಡಯಟ್‌ ಮಾಡುವ ಸಲುವಾಗಿ ಕೆಲವೇ ಕೆಲವು ಆಹಾರ ಪದಾರ್ಥಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿರುತ್ತಾರೆ  ಅದರಿಂದಲೂ ಈ ಸಮಸ್ಯೆ ಕಾಡಬಹುದು ವೈದ್ಯರ ಸಲಹೆಯಂತೆ ಪಾಲಿಸಿದರೆ ಒಳಿತು.

ಮೊಟ್ಟೆ ಸೇವನೆ ಮಾಡಿದರೆ ಒಳ್ಳೆಯದು ಆದರೆ ಹಸಿ ಮೊಟ್ಟೆ ಸೇವನೆ ಮಾಡಿದರೆ ಬಯೋಟಿನ್‌ ಕೊರತೆಯುಂಟಾಗಿ ಕೂದಲಿನ ಮೇಲೆ ಪರಿಣಾಮವನ್ನು ಬೀರುತ್ತದೆ.

ನೋಡಿದ್ರಲ್ಲಾ ವೈದ್ಯರ ಸಲಹೆಯಂತೆ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸಿದರೆ ಇಂತಹ ಸಮಸ್ಯೆಗಳು ಬರುವುದಿಲ್ಲ ಆದ್ದರಿಂದ ಯಾವುದೇ ಹೊಸ ಶೈಲಿಯನ್ನು ಪ್ರಾರಂಬಿಸಬೇಕಾದ್ರೆ ಸಲಹೆಯನ್ನು ಪಡೆಯುವುದು ಉತ್ತಮ.

Leave a Reply

Your email address will not be published. Required fields are marked *