ನವದೆಹಲಿ: ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರದ ಕೊಲೆ ಪ್ರಕರಣ ಕುರಿತು ಎಲ್ಲೆಡೆಯಲ್ಲಿಯೂ ಪ್ರತಿಭಟನೆಗಳು ನಡೆದಿರುವುದು ಎಲ್ಗರಿಗೂ ತಿಳಿದೇ ಇದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಕ್ರಿಯಿಸಿದ್ದು ಯಾವುದೇ ಸಮಾಜವು ಮಹಿಳೆಯರನ್ನು ಇಂತಹ ದೌರ್ಜನ್ಯಗಳಿಗೆ ಅನುಮತಿ ನೀಡುವುವಿಲ್ಲವೆಂದು ಆಕ್ರೋಶವನ್ನು ಹೊರಹಾಕಿದ್ದಾರೆ.
“ಯಾವುದೇ ನಾಗರೀಕ ಸಮಾಜವು ಹೆಣ್ಣುಮಕ್ಕಳ ದೌರ್ಜನ್ಯವನ್ನು ಒಳಪಡಿಸಲು ಅನುಮತಿಸುವುದಿಲ್ಲ…ಸಾಕು” ಎಂದು ಇಂದು ಮಧ್ಯಾಹ್ನ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯಗಳನ್ನು ವಿರೋಧಿಸಿದ್ದಾರೆ.