ಬೆಂಗಲೂರು: ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದಂತ ಪೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಬೇಟಿನೀಡಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬ ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ, ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ ಗಾಂಜಾ, ಸಿಗರೇಟ್ ,ಇತ್ಯಾದಿ.…ಎನ್ನುವ ಸ್ಪೋಟಕ ಮಾಹಿತಿ ಬಹಿರಂಗ ಮಾಡಿದ್ದಾನೆ.
ಪರಪ್ಪನ ಅಗ್ರಹಾರಕ್ಕೆ ಬಂದಂತಹ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಜೈಲು ಅಧಿಕಾರಿಗಳೊಂದಿಗೆ ರಾಜಾತಿಥ್ಯ ವಿಚಾರವಾಗಿ ಚರ್ಚಿಸಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎನ್ನಲಾಗಿದೆ.