ಬೆಂಗಳೂರು:”ನನ್ನ ಸಹಿಯನ್ನು ನಕಲು ಮಾಡಿದ್ದಾರೆ” ಎಂದು ಹೇಳುವ ಕುಮಾರಸ್ವಾಮಿ ನೀನು ಬಹಳ ಸತ್ಯವಂತ ಬಿಡು ಎಂದು ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿಯೇ ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಚಾಟಿನನ್ನು ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಿ ನಕಲಿ ಮಾಡಿದ್ದಾರೆ ಎಂದು ಹೇಳ್ತಿದ್ದೀರಲ್ಲಾ ಇದಕ್ಕೆ ಸಂಬಂದಪಟ್ಟ ಹಾಗೆ ಯಾಕೆ ದೂರು ನೀಡಿಲ್ಲ? ಹೋದ್ರೆ ಹೋಗ್ಲಿ ಸಿಎಂ ಅವರಿಗೆ ದೂರು ನೀಡದಿದ್ದರೂ ಕೂಡಾ ಕನಿಷ್ಟ ಪೊಲೀಸರಿಗಾದರೂ ದೂರು ಕೊಡಬಹುದಾಗಿತ್ತಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ,ಶಶಿಕಲಾ ಜೊಲ್ಲೆ ವಿರುದ್ದ ತನಿಖೆ ನಡೆದಿದ್ದು ಅಧಿಕಾರಿಗಳು ಚಾರ್ಜ್‌ಶೀಟ್ ರೆಡಿಮಾಡಿದ್ದಾರೆ. ಅವರ 10 ವರ್ಷದ ಹಿಂದಿನ ಕೇಸ್ ತನಿಜೆಯೂ ಮುಗಿದಿದ್ದು ಕುಮಾರಸ್ವಾಮಿ ಸತ್ಯಕ್ಕೆ ಹೆಸರಾದ ಮಿನಿಸ್ಟರ್ .ಅವರ ವಿರುದ್ದ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡದ ರಾಜ್ಯಪಾಲರ ವಿಷಯವನ್ನು ಪ್ರಸ್ಥಾಪಿಸಸಿದ್ದು,ಪಾಪ ಕುಮಾರಸ್ವಾಮಿಯವರು ಕೆಟ್ಟ ಕೆಲಸವನ್ನು ಮಾಡುವುದಿಲ್ಲ ಸ್ವಚ್ಛ ಕೆಲಸವನ್ನಷ್ಟೇ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.