ಬೆಳಗಾವಿ: ಇಂದು ರಾಜ್ಯಾದ್ಯಂತ ಕೆಎಎಸ್ ಪರೀಕ್ಷೆ, ಪರೀಕ್ಷೆಯ ಸಮಯದಲ್ಲಿ ಆದ ಯಡವಟ್ಟು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಆಗಮನ.
ಹೌದು ಪರೀಕ್ಷೆ ಸಮಯದಲ್ಲಿ ತಡವಾಗಿ ಪ್ರಶ್ನೆಕೆನೀಡಿರುವುದಲ್ಲದೆ ಒಎಂಆರ್ ಶೀಟ್ ಅದಲು ಬದಲಾದ ಕಾರಣ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದ್ದು ಗೊಂದಲವನ್ನು ಪರಿಹರಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ದಿಡೀರ್ ಆಗಿ ಭೇಟಿ ನೀಡಿದ್ದಾರೆ. ಈ ಘಟನೆಯು ಅಂಜುಮನ್ ಕಾಲೇಜಿನಲ್ಲಿ ನಡೆದಿದೆ.
ಒಎಂಆರ್ ಶೀಟ್ ಅದಲು ಬದಲಾಗಿರುವ ಕಾರಣ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ ಪೊಲೀಸ್ ಅಧಿಕಾರಿಗಳ ಜೊತೆ ಪರೀಕ್ಷಾ ವಿದ್ಯಾರ್ಥಿಗಳು ವಾಗ್ವಾದವನ್ನ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರವರು OMR ಶೀಟ್ ಅದಲು, ಬದಲಾದ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಸಮಯವನ್ನು ನೀಡುವಂತೆ ಕೆಪಿಎಸ್ಸಿಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.
ನಂತರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಆರಂಭ ಮಾಡಿದ್ದಾರೆ.