ಕೋಲ್ಕತ್ತಾ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಸಂಜಯ್ ರಾಯ್ ಎಂಬ ಆರೋಪಿಗೆ ನಾನು ತಪ್ಪು ಮಾಡಿದ್ದೇನೆ ಎಂಬ ಕಿಂಚಿತ್ ಪಶ್ಚಾತಪವಿಲ್ಲ ಕ್ರೂರ ಪ್ರಾಣಿಯ ಮನಸ್ಥಿತಿಯವನು ಎಂಬುದನ್ನು ವೈದ್ಯರು ಬಹಿರಂಗ ಪಡಿಸಿದ್ದಾರೆ.
ಸಿಬಿಐ ಆಗಸ್ಟ್ 18 ರಂದು ಆರೋಪಿ ಸಂಜಯ್ ರಾಯ್ ಮನಸ್ಥಿಯನ್ನು ತಿಳಿದುಕೊಳ್ಳಲು ಸಿಎಫ್‌ಎಲ್ ತಜ್ಞರಿಗೆ ತಿಳಿಸಿದ್ದರು.ಆ ಕ್ರೃರ ಮನುಷ್ಯನಿಗೆ ಕಿಂಚಿತ್ ಅಪರಾಧಿ ಪ್ರಜ್ಞೆ ಇಲ್ಲ, ಆ ದಿನ ಏನಾಯ್ತು ಎಂಬುದನ್ನು ಎಲ್ಲಿಯೂ ತಡವರಿಸದೆ ನಡೆದ ಘಟನೆಯನ್ನು ವಿವರಿಸಿದ್ದಾನೆ.ಅವನಿಗೆ ನಾನು ಕ್ರೈಂ ಮಾಡಿದ್ದೀನಿ ಎನ್ನುವ ಪಶ್ಚಾತಾಪವಿರುವಂತೆ ಎಲ್ಲಿಯೂ ಕಂಡುಬರುವುದಿಲ್ಲ ಎಂದಿದ್ದಾರೆ.
ಆರೋಪಿಯನ್ನು ಕೋಲ್ಕತ್ತಾ ಹೈಕೋರ್ಟಿಗೆ ಹಸ್ತಾಂತರ ಮಾಡುವ ಮೊದಲು ವಶಪಡಿಸಿಕೊಂಡಿದ್ದ ಅಶ್ಲೀಲವಾದ ವಿಡಿಯೋಗಳಿರುವ ಮಾಹಿತಿಯನ್ನುನೀಡಿದ್ದಾರೆ.