ಇಡೀ ದೇಶವನ್ನೇ ಬೆಚ್ಚಿಬೀಳಿಸಿದಂತಹ ಕೋಲ್ಕತ್ತಾ ವೈದ್ಯೆಯ ಪ್ರಕರಣದ ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ ಎಂದು ಜನ ಪ್ರತಿಭಟಿಸುತ್ತಿದ್ದಾರೆ. ಇದರ ಮಧ್ಯೆ ನಾನು ನಂದಿನಿʼ ಎಂದು ರೀಲ್ಸ್ ಮಾಡಿಕೊಂಡು ಫೇಮಸ್ ಆಗಿರುವ ವಿಕಾಸ್ ವಿಕ್ಕಿಪೀಡಿಯಾ ಅವರ ಮತ್ತೊಂದು ರೀಲ್ಸ್ ವೈರಲ್ ಆಗುತ್ತಿದೆ.
ಪ್ರತಿಬಾರಿ ಅತ್ಯಾಚಾರಕ್ಕೊಳಗಾಗಿ ತಮ್ಮ ಜೀವನವನ್ನು ಕಳೆದುಕೊಂಡ ಎಷ್ಟೋ ಹೆಣ್ಣುಮಕ್ಕಳ ದುರಂತ ನಡೆದರೂ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುತ್ತವೆ. ಅದರಲ್ಲಿ ಕೆಲವರು ಹೆಣ್ಣುಮಕ್ಕಳು ಹಾಕಿಕೊಳ್ಳುವ ದಿರಿಸುಗಳು (ವಸ್ತ್ರವೇ) ಕಾರಣವೆಂದು ಹೆಣ್ಮಕ್ಕಳ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ತಡರಾತ್ರಿಯವರೆಗೂ ಯಾಕೆ ಹೊರಗಡೆ ಇರ್ತಾರೆ ಕತ್ತಲಾಗುವ ಮುಂಚೆಯೇ ಮನೆ ಸೇರಿಕೊಳ್ಳಬೇಕು ಹಾಗೆ ಆದಾಗ ಮಾತ್ರ ಇಂತಹ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ ಎಂದು ಕೆಲವರು ಹೇಳಿಕೆಗಳನ್ನು ನೀಡುತ್ತಾರೆ.ಈ ರೀತಿಯ ಮಾತನಾಡುವ ಗಂಡು ಮಕ್ಕಳಿಗೆ ವಿಕಾಸ್ ತನ್ನ ರೀಲ್ಸ್ ಮೂಲಕ ತಿರುಗೇಟನ್ನು ನೀಡಿದ್ದಾರೆ.
ಇಲ್ಲಿ ತನ್ನ ಮಗ “ಹೆಣ್ಣುಮಕ್ಕಳು 6 ಗಂಟೆಯ ಒಳಗೆ ಮನೆಗೆ ಬಂದ್ರೆ ಸೇಫಾಗಿ ಇರ್ತಾರೆ” ಇದೊಂದೆ ಪರಿಹಾರ. ಇಲ್ಲದೆ ಹೋದರೆ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಲೈವ್ ಟಿವಿಗೆ ಬೈಟ್ ನೀಡಿರುತ್ತಾನೆ. ಇದನ್ನು ವಿಕ್ಷೀಸಿದ ತಾಯಿ ತನ್ನ ಗಂಡನಿಗೆ ಕೂಡಲೇ ಮಗನನ್ನು 6 ಗಂಟೆ ಒಳಗೆ ಮನೆಗೆ ಬರುವಂತೆ ಹೇಳಲು. ತಂದೆ ತಕ್ಷಣ ಫೋನ್ ಮನೆಗೆ ಬೇಗ ಬಾ ಎಂದು ಕರೆಯುತ್ತಾನೆ. ಮಗ ತಂದೆಯ ಹೇಳಿದ ಕೂಡಲೇ ಮನೆಗೆ ಬರ್ತಾನೆ.ಅಮ್ಮಾ ನನ್ನನ್ನು ಯಾಕೆ 6 ಗಂಟೆ ಒಳಗೆ ಮನೆಗೆ ಬಾ ಎಂದು ಹೇಳಿದೆ ಎಂದು ಪ್ರಶ್ನೆ ಕೇಳ್ತಾನೆ. ಅದಕ್ಕೆ ಉತ್ತರಿಸಿದ ಅಮ್ಮ ಹೀಗೆ ಹೇಳ್ತಾರೆ “ನೀನು 6 ಗಂಟೆಯ ಒಳಗೆ ಮನೆಗೆ ಬಂದರೆ ಹೆಣ್ಣುಮಕ್ಕಳು ಸೇಫಾಗಿ ಹೊರಗೆ ಓಡಾಡಬಹುದು ಅಲ್ಲಪ್ಪ?” ಎಂದು ತಾಯಿ ಟಿವಿಯಲ್ಲಿ ಬೈಟ್ ನೀಡಿದ ಮಗನಿಗೆ ಹೇಳ್ತಾರೆ. ಈ ರೀಲ್ಸ್ ಹೆಣ್ಣುಮಕ್ಕಳ ಬಗ್ಗೆ ಮಾತಾಡೋ ಗಂಡಸರಿಗೆ ಬುದ್ಧಿ ಹೇಳುವಂತಿದೆ,
ಯಾಕೆ ಹೆಣ್ಣುಮಕ್ಕಳೇ ಯಾವಾಗ್ಲೂ ಬಲಿಪಶು ಆಗ್ಬೇಕು. ಪ್ರತಿಯೊಬ್ಬ ತಂದೆತಾಯಿಯೂ ತಮ್ಮ ಗಂಡು ಮಕ್ಕಳಿಗೆ ಸರಿಯಾಗಿ ಬುದ್ದಿ ಹೇಳಿದರೆ ಈ ರೀತಿಯ ಘಟನೆಗಳು ನಡೆಯುವುದನ್ನು ತಡೆಯಬಹುಗಿದೆ.
ಏನೇ ಆಗ್ಲಿ ಸಮಾಜಕ್ಕೆ ಸಂದೇಶ ನೀಡುವ ಈ ರೀತಿಯ ಮತ್ತಷ್ಟು ಸಿನಿಮಾ, ವಿಡಿಯೋಗಳು ಸಾಕಷ್ಟು ಬರಲಿ ಎಂದು ಆಶಿಸೋಣ.