ಹುಬ್ಪಳಿ: ನಮ್ಮ ಪಕ್ಷದಲ್ಲಿ ಇದ್ದುಕೊಂಡು ಸ್ವಪಕ್ಷದ ವಿರುದ್ದ ಟೀಕೆ ಮಾಡುತ್ತಿರುವ ಯತ್ನಾಳ್ ವಿರುದ್ದ ಹೈಕಮಾಂಡ್ ಶೀಘ್ರದಲ್ಲೇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಹೇಳಿದ್ದಾರೆ.
ಪಕ್ಷದ ವಿರುದ್ದ ಮಾತನಾಡುವುದನ್ನು ನಾವು ಸಹಿಸುವುದಿಲ್ಲ. ನಮ್ಮ ತಾಳ್ಮೆಗೂ ಮಿತಿಯಿದೆ ಯಾರಾದರೂ ಅದನ್ನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ವಾಲ್ಮೀಕಿ ಅಕ್ರಮ ಹಣ ವರ್ಗಾವಣೆ ವಿರುದ್ದ ಬಿಜೆಪಿ ನಾಯಕರು ಬಳ್ಳಾರಿಗೆ ಪಾದಯಾತ್ರೆಯನ್ನ ನಡೆಸಿರುವುದರ ಕುರಿತು ಮಾತನಾಡಿದ ಅವರು ಬೆಂಗಳೂರಿನಿಂದ ಮೈಸೂರಿಗೆ ಹೋದ ಪಾದಯಾತ್ರೆಯೂ ಈಗಾಗಲೇ ಎಲ್ಲರ ಗಮನಕ್ಕೂ ಬಂದಿರುವ ಕಾರಣ ಮತ್ತೆ ಪಾದಯಾತ್ರೆ ಮಾಡುವ ಅಗತ್ಯವಿಲ್ಲ. ಮಾಡಲೇ ಬೇಕು ಎನ್ನುವ ಸಂದರ್ಭ ಬಂದರೆ ಹೈಕಮಾಂಡ್ ಒಪ್ಪಿಗೆ ಪಡೆದು ಮಾಡಲಿ. ಎಲ್ಲಾ ರಾಜ್ಯ ಘಟಕದ ಅಧ್ಯಕ್ಷರೂ, ನಾಯಕರೂ ಭಾಗವಹಿಸುತ್ತಾರೆಂದು ಹೇಳಿದ್ದಾರೆ.