ಬೆಂಗಳೂರು: ಕಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆಯ ಘಟನೆಯಿಂದಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ರಾತ್ರಿಯ ಸಮಯದಲ್ಲಿ ಇಬ್ಬರು ಪೇದೆಗಳನ್ನು ಕಾರ್ಯ ನಿರ್ವಹಿಸುವಂತೆ ನಗರದ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಆಗ್ರಹಿಸಿದ್ದಾರೆ.
ನಗರದಲ್ಲಿ ರಾತ್ರಿ ವೇಳೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ದೂರುಗಳು ಹೆಚ್ಚಾಗುತ್ತಿದ್ದು ಈ ವಿಷಯ ಕುರಿತಂತೆ ಬೆಂಗಳೂರು ನಗರದ ಸಂಚಾರ ಜಂಟಿ ಪೊಲೀಸ್ ಆಯುಕ್ತರಾದಂತಹ ಎಂ.ಎನ್ ಅನುಚೇತ್‌ರವರು ಈ ಆದೇಶವನ್ನು ಎಲ್ಲಾ ಸಂಚಾರ ವಿಭಾಗದ ಪಿಐಗಳಿಗೆ ತಲುಪಿಸಿದ್ದಾರೆ.
ಇದೇ ಕಾರಣಕ್ಕಾಗಿ ಪ್ರತಿ ದಿನ ರಾತ್ರಿ ಕಾರ್ಯನಿರ್ವಹಿಸಲು ಇಬ್ಬರು ಮಹಿಳಾ ಸಿಬ್ಬಂದಿಗಳು ಕಡ್ಡಾಯವಾಗಿರಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ.