ಚೆನ್ನೈ: ತಮಿಳು ನಟ ವಿಜಯ್ ದಳಪತಿಯು ಚೆನೈನ ಪಕ್ಷದ ಪ್ರಧಾನ ಕಛೇರಿಯಲ್ಲಿ ತಮ್ಮ ರಾಜಕೀಯ ಪಕ್ಷ ʼವೆಟ್ರಿ ಕಳಗಂʼ ಪಕ್ಷದ ಚಿನ್ಹೆಯನ್ನು ಬಿಡುಗಡೆ ಮಾಡುವುದರ ಮೂಲಕ ರಾಜಕೀಯ ವಲಯದಲ್ಲಿ ಸಂಚಲವನ್ನುಂಟು ಮಾಡಿದ್ದಾರೆ.
ವಿಜಯ್‌ರವರು ʼವೆಟ್ರಿ ಕಳಗಂʼ ಎಂಬ ರಾಜಕೀಯ ಪಕ್ಷವನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿದ್ದರು ಎನ್ನಲಾಗಿದ್ದ ಪಕ್ಷಕ್ಕೆ ಬಾವುಟ ಮತ್ತು ಚಿಹ್ನೆಯನ್ನು ಇದೀಗ ಬಿಡುಗಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
2026ರಲ್ಲಿ ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆಯೇ ಗೋಷಿಸಿದ್ದರು. ಈ ಹಿಂದೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳಲಿಲ್ಲ ಮತ್ತು ಬೆಂಬಲವೂ ನೀಡಿಲ್ಲ.