ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮವಾಗಿದ್ದು ಸೆಪ್ಟೆಂಬರ್ ಮೊದಲವಾರದಲ್ಲಿ ಜಾರ್ಜ್ಶೀಟ್ ಸಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಕೊಲೆ ಪ್ರಕರಣವೂ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಲೇ ಇದ್ದಾರೆ. ಪ್ರಕರಣದ ತನಿಖೆಯು ಅಂತಿಮ ಹಂತಕ್ಕೆ ಬಂದಿದ್ದು ಮುಂದಿನ ತಿಂಗಳ ಅಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಲ್ಲಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಪೊಲೀಸರು ದರ್ಶನ್ ಅವರನ್ನು ಮೊದಲ ಅರೋಪಿಯಾಗಿ ಮಾಡಲು ನಿರ್ಧರಿಸಿರುವುದು ದರ್ಶನ್ಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಪ್ರಚೋದನೆ ಮಾಡಿರುವ ಕಾರಣದ ಶಂಕೆಯಿಂದ ಅವರನ್ನು ಮೊದಲ ಆರೋಪಿಯಾಗಿ ಪರಿಗಣಿಸಲಾಗಿತ್ತು ಆದರೆ ತನಿಖೆಯಲ್ಲಿ ತಿಳಿದುಬಂದಿರುವ ವಿಷಯವೆಂದರೆ ಎಲ್ಲವೂ ನಟ ದರ್ಶನ್ ಪ್ಲಾನ್ ಪ್ರಕಾರ ನಡೆದಿದೆ ಎಂಬ ಸಾಕ್ಷಿಗಳು ಬಲವಾಗಿವೆ ಆದ್ದರಿಂದ ದರ್ಶನ್ರನ್ನು ಮೊದಲ ಆರೋಪಿ ಎಂದು ನಿರ್ಧರಿಸಲಾಗಿದೆ .