ಬೆಂಗಳೂರು: ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯನವರ ಪತ್ನಿ ಬರೆದಿರುವ ಪತ್ರದಿಂದಲೇ ಸತ್ಯಾಂಶ ಹೊರಬೀಳಲಿದೆ ಎಂದು ದೂರುದಾರರಾದಂತಹ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯನವರೇ ಸ್ವತಃ ಸತ್ಯಾಂಶವನ್ನು ಮುಚ್ಚಿಟ್ಟು ಸುಳ್ಳು ಎಂದು ಹೇಳುತ್ತಿದ್ದಾರೆ .ಆದರೆ ಸಿಎಂ ಮತ್ತು ಅವರ ಕುಟುಂಬ 2001ರಲ್ಲಿ ಮುಡಾ ಜಮೀನನ್ನು ವಶಪಡಿಸಿಕೊಂಡಿದ್ದಾರೆ.ಅಂತದ್ದರಲ್ಲಿ ಸಿದ್ದರಾಮಯ್ಯನವರ ಬಾಮೈದ 2004ರಲ್ಲಿ ಹೇಗೆ ಕೃಷಿಭೂಮಿಯನ್ನು ಕೊಂಡುಕೊಳ್ತಾರೆ ಎಂದು ಪ್ರಶ್ನಿಸಿದ್ದಾರೆ?
ಸಿದ್ದರಾಮಯ್ಯನವರ ಪತ್ನಿ ಮುಡಾಗೆ ಬರೆದಿರುವ ಪತ್ರ ಮಹತ್ವದ್ದಾಗಿದ್ದು ಈ ಪತ್ರದ ಕುರಿತು ಸ್ಪಷ್ಟನೆ ನೀಡಲಿ , ದಾಖಲೆಗಳನ್ನೆಲ್ಲಾ ಗಮನಿಸಿದರೆ ಆರೋಪ ಸಾಬೀತಾಗುವಂತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆಯನ್ನ ನೀಡಿದ್ದಾರೆ.