ಬೆಂಗಳೂರು: ಬಿಜೆಪಿ ಪಕ್ಷದಲ್ಲಿರುವ ಅಂತರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ ಆ ಪ್ರತಿಭಟನೆಗೆ ಯಾವುದೇ ರೀತಿಯ ಅರ್ಥವಿಲ್ಲವೆಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲಿಂದು ಮಾತನಾಡಿದ ಅವರು ಮುಡಾ ಅಕ್ರಮ ಕುರಿತ ಪ್ರತಿಭಟನೆ ಎಂದು ಮೈಸೂರು ಚಲೋ ಮಾಡಿದ್ದಾರೆ.ಅದಕ್ಕೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇವೆ. ಈಗ ಯಾರು ಪ್ರತಿಭಟನೆ ಮಾಡುವವರನ್ನು ತಡೆಯುತ್ತಾರೆ ? ಪ್ರತಿಭಟನೆಯನ್ನು ಯಾರುಬೇಡ ಎಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ತುಂಗಾಭದ್ರಾ ಅಣೆಕಟ್ಟನ್ನು ಈಗಾಗಲೇ ದುರಸ್ಥಿ ಮಾಡಿಸಲಾಗಿದೆ. ಅಣೆಕಟ್ಟು ತುಂಬಿದ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಮತ್ತು ನಾನು ಬಾಗಿನ ಅರ್ಪಿಸುತ್ತೇವೆ ಅದರ ಜೊತೆಗೆ ಅಣೆಕಟ್ಟು ದುರಸ್ತಿ ಕಾರ್ಯದಲ್ಲಿದ್ದವರೆಲ್ರಿಗೂ ಗೌರವವನ್ನು ನೀಡಲಿದೆ ಸರ್ಕಾರ ಎಂದು ಡಿಕೆಶಿ ತಿಳಿಸಿದ್ದಾರೆ.