ವಿರಾಟ್ ಕೊಹ್ಲಿಯನ್ನು ಪ್ರೀತಿಸದವರಿಲ್ಲ. ಆಟದ ಮೈದಾನದಲ್ಲಿ ಅಬ್ಬರಿಸುವ ಇವರು ಯುವ ಆಟಗಾರರಿಗೆ ಅಚ್ಚುಮೆಚ್ಚು. ಏಕೆಂದರೆ ಅವರು ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸುವುದರಲ್ಲಿ ಒಂದು ಕೈ ಮೇಲೆ ಎಂದರೆ ತಪ್ಪಾಗಲಾರದು ಎಂದು ಆರ್ ಸಿ ಬಿ ತಂಡದ ಬೌಲರ್ ಯಶ್ ದಯಾಳ್ ಹೇಳಿದ್ದಾರೆ.
ಮೊದ ಮೊದಲು ಮಂಕಾಗಿದ್ದ ನನಗೆ ಭರವಸೆ ತುಂಬಿ ಸೀಸನ್ ಪೂರಾ ನನ್ನನ್ನು ಲವಲವಿಕೆಯಿಂದಿರುವಂತೆ ಮಾಡಿದ್ದರು. ಅವರು ತುಂಬಿದ ಆತ್ಮವಿಶ್ವಾಸ ನನ್ನನ್ನು ಎಲ್ಲರೊಂದಿಗೆ ಬೆರೆಯಲು ಸಹಾಯವಾಯಿತು. ನಾನು ಹೊಸಜಾಗಕ್ಕೆ ಬಂದಿದ್ದೇನೆ ಎನ್ನುವುದನ್ನು ಮರೆತು ಒಳ್ಳೆಯ ಪ್ರದರ್ಶನ ನೀಡಲು ಸಾದ್ಯವಾಯಿತು. ಅವರ ಸ್ನೇಹಮಯವಾದ ವರ್ತನೆ ಎಲ್ಲಾ ಆಟಗಾರರಿಗೆ ಸ್ಪೂರ್ತಿಯಾಗಿತ್ತು. ಹೊಸ ಹೊಸ ಆಟಗಾರರ ಜೊತೆ ಪ್ರೆಂಡ್ಲಿಯಾಗಿರ್ತಾರೆ. ಅವರನ್ನು ಮತ್ತಷ್ಟು ಹುರಿದುಂಬಿಸುತ್ತಾರೆ. ಮಾಧ್ಯಮಗಳಲಿ ಅವರ ಬಗ್ಗೆ ಬರುವ ಎಲ್ಲಾ ನೆಗಿಟಿವ್ ಸುದ್ದಿಗಳಿಗೆ ತದ್ವಿರುದ್ದವಾಗಿದ್ದಾರೆ. ಯುವ ಆಟಗಾರರೊಂದಿಗೆ ಚೆನ್ನಾಗಿ ಮಾತನಾಡುತ್ತ ಅವರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಈ ರೀತಿಯ ವ್ಯಕ್ತಿತ್ವ ಅವರದು ಮಾದ್ಯಮಗಳಲಿ ತೋರಿಸುವ ಸುದ್ದಿಗಳು ಸತ್ಯಕ್ಕೆ ದೂರ ಎಂದಿದ್ದಾರೆ ಯಶ್ ದಯಾಳ್.