ದಕ್ಷಿಣ ಕನ್ನಡ :ಶಾಲೆಯೊಂದರಲ್ಲಿ ಮುಸ್ಲಿಂ ಬಾಲಕಿಗೆ ಹಿಂದೂ ಬಾಲಕನು ಚಾಕುವಿನಿಂದ ಇರಿದಿರುವ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಕೊಂಬೆಟ್ಟು ಎಂದು ತಿಳಿದುಬಂದಿದೆ.
ಹಲ್ಲೆ ಮಾಡಲು ಚಾಕುವನ್ನು ಬಳಸಲಾಗಿದ್ದು ದಾಳಿಗೊಳಗಾದ ಬಾಲಕಿಯನ್ನು ಪುತತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ಸ್ಥಳವನ್ನು ಸಿಸಿಟಿವಿಯ ದೃಷ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿ ದಾಳಿಯಿಂದಿನ ಉದ್ದೇಶವೂ ಅಸ್ಪಷ್ಟವಾಗಿದ್ದ ಪ್ರಾರಂಭದಲ್ಲಿ ಶಾಲೆಯ ಪ್ರಿನ್ಸಿಪಾಲರು ಬಾಲಕಿಯ ಗಾಯ ಆಕಸ್ಮಿಕ ವಾಗಿ ಬಿದ್ದ ಗಾಜಿನಿಂದ ಉಂಟಾಗಿವೇ ಎಂದು ತಪ್ಪಾಗಿ ವರದಿ ಮಾಡಿದ್ದರು. ನಂತರ ಅವರ ಊಹೆಯಂತೆ ಬಾಲಕಿಯನ್ನು ಪ್ರಥಮ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ ನಂತರ ವಿಡಿಯೋ ಹೇಳಿಕೆಯನ್ನಲಿ ವಿದ್ಯಾರ್ಥಿನಿ ಇದು ನಿಜವಲ್ಲ ನನ್ನ ಸಹಪಾಠಿ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿಸಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಮತ್ತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.