ವಾರಾಣಾಸಿ: ಮುಸ್ಲಿಂ ಧರ್ಮದಲ್ಲಿರುವ ಅಲ್ಲಾಹ್ ಎಂಬ ಪದ ಸಂಸ್ಕೃತದ ಮೂಲದ್ದು ಎಂದು ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಹೇಳಿಕೆ ನೀಡಿದ್ದಾರೆ.
ಅಲ್ಲಾಹ್ ಎಂಬ ಶಬ್ದವನ್ನು ಹಿಂದೂ ಧರ್ಮದವರೂ ದುರ್ಗಾ ಮಾತೆಯನ್ನು ಪೂಜಿಸುವಾಗ ಬಳಸುವ ಶಬ್ದವಾಗಿದ್ದು ಇದು ಶಕ್ತಿಯ ಸೂಚಕವಾಗಿದೆ ಎಂದಿರುವ ಅವರು ಭಾರತದಲ್ಲಿರುವ ಪ್ರತಿಯೊಬ್ಬರೂ ವೈದಿಕ ಆರ್ಯನೇ ಆಗಿರುತ್ತಿದ್ದನು ಎಂದು ಹೇಳಿದ್ದಾರೆ.
ಈ ಜಗತ್ತಿನಲ್ಲಿ ಧರ್ಮದ ಬಗ್ಗೆ ಪ್ರಶ್ನೆ ಮಾಡುವವರೆಲ್ಲರೂ ಸಂಸ್ಕೃತವನ್ನು ಕಲಿಯಬೇಕು, ನಮ್ಮ ಜಗತ್ತಿನಲ್ಲಿರುವುದು ಒಂದೇ ಧರ್ಮ ಅದು ಸನಾತನ ಧರ್ಮವೆಂದು ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳುತಿಳಿಸಿದ್ದಾರೆ.
ಈ ಹಿಂದೆ ಮುಸ್ಲೀಂರ ʻಓಂ ಮತ್ತು ಅಲ್ಲಾಹ್ʼ ಎಂಬ ಎರಡೂ ಶಬ್ದಗಳು ಒಂದೇ ಎಂದು ಹೇಳಿಕೆ ನೀಡಿದ ಮೌಲಾನಾ ಸಯೀದ್ ಅರ್ಶದ್ ಮದನಿ ಅವರ ಹೇಳಿಕೆಯನ್ನು ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಖಂಡಿಸಿದ್ದಾರೆ.