ಪಾಕಿಸ್ತಾನದ 19 ವಯಸ್ಸಿನ ಇಕ್ರಾ ಜಿವಾನಿ ಮತ್ತು ನಮ್ಮ ದೇಶದ 25ವಯಸ್ಸಿನ ಮುಲಾಯಂ ಸಿಂಗ್ ಯಾದವ್ ನಡುವಿನ ಪ್ರೇಮ ಕಥೆ ಹಿಸ್ಟರಿಯ ಯಾವ ಪ್ರೇಮ ಕಥೆಗಳಿಗೂ ಕಮ್ಮಿಯಲ್ಲ!
ಒಬ್ಬ ಹೆಣ್ಣು ಮಗಳು ತಾನು ಪ್ರೀತಿಸಿದ ಹುಡುಗನಿಗಾಗಿ ಶತ್ರು ದೇಶದ ಸೈನಿಕರ ಕಣ್ಣು ತಪ್ಪಿಸಿ ಗಡಿ ದಾಟಿ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ.ಅಷ್ಟಕ್ಕೂ ಇಕ್ರಾ ಜಿವಾನಿ ಭಾರತಕ್ಕೂ ಬರುವ ಮೊದಲು ನೇಪಾಳ ಪ್ರವೇಶ ಮಾಡಿದ್ದಾಳೆ ಅಲ್ಲಿಂದ ನಮ್ಮ ಮುಲಾಯಂ ಸಿಂಗ್ ಭಾರತಕ್ಕೆ ಕರೆತಂದಿದ್ದ!
ಇಷ್ಟೆಲ್ಲ ಕಷ್ಟು ಪಟ್ಟು ಒಟ್ಟು ಸೇರಿದ ಪ್ರೇಮಿಗಳಿಗೆ ಗಡಿ ರಾಷ್ಟ್ರಗಳೇ ಶತ್ರುವಾಗಿಬಿಟ್ಟವು..ಪ್ರೀತಿಸಿ ಮದುವೆಯಾಗಿ ಒಟ್ಟಾಗಿ ಸಂಭ್ರಮಿಸಿ ಸಂತೋಷದಿಂದಿದ್ದ ದಂಪತಿಗಳನ್ನು ಬೇರ್ಪಡಿಸಿದ ಪೋಲಿಸರು ಬೆಂಗಳೂರಿನಿಂದ ಅಮೃತಸರಕ್ಕೆ ಕರೆತಂದು ಇಕ್ರಾ ಜಿವಾನಿಯನ್ನು ಪಾಕಿಸ್ತಾನಕ್ಕೆ ವಾಪಸು ಕಳುಹಿಸಿದರು.
ಒಂದು ದೊಡ್ಡ ಪ್ರೀತಿಯನ್ನು ಅಂತ್ಯಗೊಳಿಸಿದ ಗಡಿ ಮತ್ತು ಪ್ರಭುತ್ವಗಳು ಏನೋ ಮಹತ್ವದನ್ನು ಸಾಧಿಸಿದ ಖುಷಿಯಲ್ಲಿದೆ..
ಪ್ರೇಮಿಗಳು ದುಃಖದಲ್ಲಿದ್ದಾರೆ…