ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರುಗಳ ನಡೆಗಳು ಚುರುಕಾಗಿದ್ದು, ಚಟುವಟಿಕೆಗಳು ಕ್ರೀಯಾಶೀಲವಾಗಿರುತ್ತವೆ. ಇದರ ನಡುವೆ ಮುಂಬರುವ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ನಾನು ಸ್ಪರ್ಧೆ ಮಾಡ್ತೇನೆ ಎಂದು ಹೇಳಿಕೆ ನೀಡಿ, 100 ರೂಪಾಯಿ ಕೊಡಿ, ವೋಟು ಕೊಡಿ ಎಂದು ಬೇಡುತ್ತಿದ್ದಾರೆ.
ಈ ಹೇಳಿಕೆಯ ವಿಚಾರವಾಗಿ ‘ಹಣಕ್ಕಾಗಿ ಸ್ಪರ್ಧೆ ಮಾಡುತ್ತಿದ್ದಾರೆ’ ಎಂದು ಸುನೀಲ್ ಕುಮಾರ್ ಆರೋಪವನ್ನು ಮಾಡಿರುವುದಕ್ಕೆ ಕಾರ್ಕಳದಲ್ಲಿ ಪ್ರತಿಕ್ರಿಯಿಸಿದ ಮುತಾಲಿಕ್ ಹೀಗೆ ಹೇಳಿದ್ದಾರೆ.
ಕೇವಲ ಹಣ ಸಂಪಾದನೆಗೆ ಚುನಾವಣಾ ಸ್ಪರ್ಧೆ ಮಾಡುತ್ತೇನೆಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್ ಹಣ ಸಂಪಾದನೆ ಮಾಡಲು ಇಷ್ಟು ವರ್ಷಗಳು ಬೇಕಾಗಿರಲಿಲ್ಲ ನಾನು ರಾಜಕೀಯದಲ್ಲಿ 45 ವರ್ಷದಿಂದ ಇದ್ದೇನೆ ಮನಸ್ಸು ಮಾಡಿದ್ದರೆ ಕೋಟಿಗಟ್ಟಲೆ ಸಂಪಾದನೆಯನ್ನು ಮಾಡಬಹುದಿತ್ತು. ನಾನು ರಾಜಕೀಯಕ್ಕೆ ಬರುವ ಮುಂಚೆ ಸುನೀಲಯ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದು, ನಕಲಿ ಹಿಂದುಗಳ ಭ್ರಷ್ಟಚಾರದ ವಿರುದ್ದ ಹೋರಾಟವನ್ನು ಮಾಡಬೇಕಿದೆ ಮ್ತತು ಅಸಲಿ ಹಿಂದುತ್ವ ವನ್ನು ಬಹಿರಂಗ ಮಾಡಲು ಕಾರ್ಕಳಕ್ಕೆ ಬಂದಿದ್ದೇನೆ ಎಂದಿದ್ದಾರೆ.