ಗೋದ್ರಾ ಗಲಭೆಯ ಸಾಕ್ಷ್ಯಚಿತ್ರವನ್ನು ಪ್ರಸಾರವನ್ನು ತಡೆಹಿಡಿದಿದ್ದಲ್ಲದೆ, ಬಿಬಿಸಿ ಚಾನೆಲ್ ವಿರುದ್ದ ಒಂದು ರೀತಿಯ ಅಘೋಷಿತ ನಿಷೇಧವನ್ನು ಹೇರಲಾಗಿದೆ. ಇದೀಗ ಬಿಬಿಸಿ ಕಚೇರಿಯ ಮೇಲೆ ಐಟಿ ದಾಳಿಯನ್ನ ನಡೆಸಲಾಗಿದ್ದು, ಐಟಿ ಅಧಿಕಾರಿಗಳು ಸಿಬ್ಬಂದಿ ವರ್ಗದವರ ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕಛೇರಿಯ ಮುಖ್ಯಸ್ಥರನ್ನು ಬಿಟ್ಟು ಮತ್ತೆಲ್ಲರನ್ನೂ ಮನೆಗಳಿಗೆ ಕಳುಹಿಸಲಾಗಿದೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ.