ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಂಡು, ಸಾಕಷ್ಟು ಹಣ ಗಳಿಸಿತ್ತು. ಅಲ್ಲದೆ, ಪರ ವಿರೋಧದ ಚರ್ಚೆಗಳು ನಡೆದುಹೋಗಿದ್ದವು. ಇದಕ್ಕೆಲ್ಲಾ ಕಾರಣ ಆ ಚಿತ್ರದ ನಿರ್ದೇಶಕ ಬುಡಕಟ್ಟು ಸಂಸ್ಕೃತಿಯನ್ನು ಹಿಂದುಯಿಸಂಗೆ ಹೋಲಿಸಿದ್ದೇ ಆಗಿತ್ತು. ಇದರ ನಡುವೆ ಕೇರಳದ ಕೋಝಿಕ್ಕೋಡ್ ಟೌನ್ ಪೊಲೀಸ್ ಠಾಣೆಯಲ್ಲಿ ಕಾಂತಾರ ಚಿತ್ರ ಹಾಡಿನ ನಕಲು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರ್ಗಂದೂರ್ ಹಾಜರಾಗಿದ್ದಾರೆ.
ಮಲೆಯಾಳಂನ ಸಂಗೀತ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಹಾಗೂ ಮಾತೃಭೂಮಿ ಕೊಟ್ಟಿರುವ ದೂರಿನ ಅನ್ವಯ ಪ್ರಕಾರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. ಕಾಂತಾರದಲ್ಲಿನ ವರಾಹ ರೂಪಂ ಹಾಡನ್ನು ಮಾತೃಭೂಮಿ ಮ್ಯೂಸಿಕ್‌ಗಾಗಿ ತೈಕ್ಕುಡಂ ಬ್ರಿಡ್ಜ್ ಮಾಡಿದ ‘ನವರಸಂ’ ರೀತಿಯಲ್ಲಿದೆ ಎಂದು ದೂರಿನಲ್ಲಿ ಬರೆಯಲಾಗಿದೆ. ಇದರ ವಿಚಾರವಾಗಿ ಸೋಮವಾರಕ್ಕೆ ವಿಚಾರಣೆಯನ್ನ ಮುಂದುವರಿಯಲಿದೆ ಎನ್ನಲಾಗಿದೆ. ಈ ಕುರಿತು ರಿಷಬ್ ಯಾವ ರೀತಿ ಹೇಳಿಕೆಗಳನ್ನು ನೀಡುತ್ತಾರೆ ಎಂಬುದನ್ನು ದಾಖಲಿಸಿಕೊಳ್ಳುತ್ತೇವೆ ಎಂದು ಕೋಝಿಕ್ಕೋಡ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಾಡನ್ನು ನಕಲು ಮಾಡಿ, ಆನಂತರ ಅದರ ಬದಲಿಗೆ ಬೇರೊಂದು ಹಾಡನ್ನು ಚಿತ್ರತಂಡ ಅಳವಡಿಸಿಕೊಂಡು, ಪ್ರಸಾರ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.