ನನ್ನ ಮೇಲೆ ನಂಬಿಕೆ ಇದ್ರೆ ಬಿಜೆಪಿಗೆ ಮತ ಹಾಕಿ ಎಂದು ಸಿದ್ದರಾಮಯ್ಯನವರು ಮಾತನಾಡುವ ಭರದಲ್ಲಿ ಆದ ಎಡವಟ್ಟು ಎಲ್ಲೆಡೆ ಚರ್ಚೆಯಾಗುತ್ತಿದೆ.

ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ವೇಗಪಡೆದುಕೊಂಡಿದ್ದು ಮಾತನಾಡುವ ಭರದಲ್ಲಿ ನನ್ನ ಮೇಲೆ ನಂಬಿಕೆ ಇದ್ದರೆ ಬಿಜೆಪಿಗೆ ಮತ ಹಾಕಿ ಎಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಈ ಘಟನೆಯು ವಿಜಯಪುರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿದೆ. ನನ್ನ ಮೇಲೆ ನಂಬಿಕೆ ಇದ್ದರೆ ಬಿಜೆಪಿ ವೋಟ್‌ ಹಾಕಿ… ಅಲ್ಲ ಅಲ್ಲ ಕಾಂಗ್ರೆಸ್ಗೆ ವೋಟ್‌ ಹಾಕಿ ಎಂದು ಕೇಳಿದ್ದಾರೆ.

ವಿಜಯಪುರದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆಯ ವೇಳೆ  ಹಣವಿಲ್ಲದೆ ಚುನಾವಣೆ ಗೆಲ್ಲುವುದೇ ಅಸಾಧ್ಯವೆಂಬ ಪರಿಸ್ಥಿಯಿ ಅರಿತ ಪುಟ್ಟ ಬಾಲಕಿಯೊಬ್ಬಳು ತಾನು ಹುಂಡಿಯಲ್ಲಿ ಕೂಡಿಟ್ಟಿದ್ದ ಸ್ವಲ್ಪ ಹಣವನ್ನು ಸಿದ್ದರಾಮಯ್ಯನವರ ಪ್ರಚಾರಕ್ಕೆ ಕೊಡೋಕೆ ಬಂದಿರುವ ಸಂಗತಿಯು ನಡೆದಿದ್ದು ಆ ಮಗುವಿನ ಮುಗ್ಧ ಮನಸಿಗೆ ಮನಸೋತ ಸಿದ್ದರಾಮಯ್ಯ ಮಗುವನ್ನು ಅಪ್ಪಿಕೊಂಡು ಹಣವನ್ನು ಹಿಂದುರಿಗಿಸಿ ಇದು ನನ್ನ ರಾಜಕೀಯ ಬದುಕಿನ ಆರಂಭದ ದಿನಗಳು ನನ್ನೆದುರಿಗೆ ಬಂದವು ಎಂದಿದ್ದಾರೆ

Leave a Reply

Your email address will not be published. Required fields are marked *