ದೇವನಹಳ್ಳಿ: ವಿಜಯಪುರ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ರಸ್ತೆ ಉದ್ದಕ್ಕೂ ಆಳುದ್ದ ಗುಂಡಿಗಳು ಬಿದ್ದಿವೆ, ಶಾಸಕರು ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಅನುಕೂಲಕ್ಕೆ ನಯಾಬೈಸೆ ನೀಡದವರು ಯಾವ ಪುರುಷಾರ್ಥಕ್ಕೆ ಬರುತ್ತಾರೆಂದು ವಿಜಯಪುರ ಪುರಸಬೆ ಸದಸ್ಯ ನಂದಕುಮಾರ್ ಕಿಡಿಕಾರಿದರು.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಂಡಿ ಮುಚ್ಚಲಾಗದ ಚುನಾಯಿತ ಸದಸ್ಯರಿಗೆ ಹಾಗೂ ಭ್ರಷ್ಟ ಆಡಳಿತ ವ್ಯವಸ್ಥೆ ವಿರುದ್ದ ಇಲ್ಲಿನ ನಾಗರೀಕರು ಶಾಪ ಹಾಕುತಿದ್ದಾರೆ.
ಜೆಡಿಎಸ್ ಆಡಳಿತಕ್ಕೆ ಅನುದಾನ ನೀಡಲಾಗದವರು ಕಾಂಗ್ರೇಸ್ ಆಡಳಿತ ಕಡೆ ತಮ್ಮ ಸಾಧನೆ ಜನತೆ ಅರ್ಥಮಾಡಿಕೊಳ್ಳಬೇಕು. ವಿಜಯಪುರ ಪುರಸಭೆಗೆ ನಿಸರ್ಗ ನಾರಾಯಣಸ್ವಾಮಿ ಅವರು ಅನುದಾನ ಬಿಡುಗಾಸನ್ನು ಕೂಡ ನೀಡದೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಈ ಹಿಂದೆ ಅತಿವೃಷ್ಟಿಯಿಂದ ಕೆರೆತುಂಬಿ ಮನೆಗಳಿಗೆ ನೀರು ನುಗ್ಗಿ ಹಲವು ಮನೆಗಳು ಹಾನಿಯಾಗಿವೆ. ಸಂತ್ರಸ್ಥರಿಗೆ ಇಲ್ಲಿವರೆಗೂ ನಷ್ಟ ಪರಿಹಾರದ ಭಾಗ್ಯವಿಲ್ಲ, ದೇವನಹಳ್ಳಿ ತಾಲ್ಲೂಕಿಗೆ ಬಿಜೆಪಿ ಸರ್ಕಾರ ಎಲ್ಲವನ್ನೂ ನೀಡಿದೆ ಎಂದು ಕಲಾಪದಲ್ಲಿ ಉತ್ತರಿಸುತ್ತಾರೆ ಇಲ್ಲಿನ ಜ್ವಲಂತ ಸಮಸ್ಯೆ ಗಮನಕ್ಕೆ ಬಂದಿಲ್ಲವೆ. ಹಾಗೆಯೇ, ನೂತನ ಉಪನೊಂದಣಿ ಕಚೇರಿ ಮಂಜೂರಾಗಿದೆ ಪ್ರಗತಿ ಕಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಬೆ ಸದಸ್ಯ ಹನೀಪುಲ್ಲಾ ಮಾತನಾಡಿ, ಇಲ್ಲಿನ ಬಡವರಿಗೆ 30 ವರ್ಷ ಕಳೆದರೂ ಸೂರಿನ ಭಾಗ್ಯವಿಲ್ಲ, ವಿಜಯಪುರ ದಶಮಾನೋತ್ಸವಕ್ಕೂ ಕೂಡ ಅನುದಾನ ನಿರ್ಲಕ್ಷ. ಒಳಚರಂಡಿ ಕಟ್ಟಿಕೊಂಡಿವೆ ಅಭಿವೃದ್ಧಿಪಡಿಸಲು ಹಣಕಾಸಿನ ಸಮಸ್ಯೆ, ವಿಜಯಪುರದಲ್ಲಿ ಒಂದು ಬಾರಿಯೂ ಉದ್ಯೋಗ ಮೇಳವನ್ನು ನಡೆಸಿಲ್ಲ, ಹಾಗಾಗಿಯೇ
ನಿರುದ್ಯೋಗ ತಾಂಡವಾಡುತ್ತಿದೆ. ಸೋಮವಾರ ಪುರಸಭೆಯ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಆ ಸಭೆಗಾದರೊ ಭೇಟಿ ನೀಡಿ ದೇವಸ್ಥಾನಗಳಿಗೆ ನೀಡುವ ದುಡ್ಡಿನಲ್ಲಿ ಅಲ್ಪವಾದರು ನಮ್ಮಲ್ಲಿ ಎಲ್ಲ ವಾರ್ಡುಗಳ ಒಳಚರಂಡಿ, ರಸ್ತೆಗಳನ್ನಾದರು ಸರಿಪಡಿಸಿ. ವಿಜಯಪುರ ಪುರಸಭೆಗೆ ತಮ್ಮ ಅದಿಕಾರದ ಅವದಿಯಲ್ಲಿ ತಮ್ಮ ಕೊಡುಗೆ ಏನೆಂಬುದನ್ನು ಸ್ವಷ್ಟಪಡಿಸಿ. ತಾವು ಶಾಸಕರಾಗುವ ಮುನ್ನ ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವೆ ಎಂಬ ಭರವಸೆ ಗೆದ್ದ ನಂತರ ನೆನಪಾಗಲಿಲ್ಲವೆ ಅದಿಕಾರದ ಲಾಲಸೆಗಾಗಿ ಬರಿ ಆಶ್ವಾಸನೆ ಬರುತ್ತೀರಾ.. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಜಯಪುರ ಪಟ್ಟಣದ ಅಬಿವೃದ್ದಿ ತಮಗೆ ನೆನಪಾಗಿದೆಯೇ. ಪಕ್ಕದ ತಾಲೂಕಿನಿಂದ ವ್ಯಾಪಾರಕ್ಕಾಗಿ ಬಂದವರು ಇಂದಿನ ಬಡವರ ಭವಣೆ ತಮಗೆ ಅರ್ಥವಾಗುವುದಾದರೂ ಹೇಗೆ ಅಧಿಕಾರಕ್ಕಾಗಿ ಇಲ್ಲಸಲ್ಲದ ಆಶ್ವಾಸನೆಗಳು ನೀಡಿ ಈ ಭಾಗದ ಜನರ ವೋಟ್ ಕಸಿಯುವ ತಂತ್ರ ನಡೆಯದು ಕಾಂಗ್ರೆಸ್ ಈ ಬಾರಿ ತಾಲೂಕಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಸಮಾಜ ಸೇವೆಯ ಸೋಗಿನಲ್ಲಿ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದ ತಮ್ಮ ಕುತಂತ್ರ ರಾಜಕಾರಣ ಮುಂಬರುವ ವಿಧಾನಸಭೆಯಲ್ಲಿ ನಡೆಯದೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಸತೀಶ್ ಕುಮಾರ್, ಹನೀಪುಲ್ಲಾ, ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಸೈಪುಲ್ಲಾ, ಮಧು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಜಗದೀಶ್, ದೇವನಹಳ್ಳಿ