ಕನ್ನಡಪರ ಹೋರಾಟರಗಾರರ ಮೇಲೆ ರೌಡಿ ಶೀಟರ್ ಒಪನ್ ಮಾಡುವುದು ಸರಿಯಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡದ ನೆಲ, ಭಾಷೆ, ಜಲಕ್ಕಾಗಿ ಹೋರಾಟ ಮಾಡುವವರ ವಿರುದ್ದ ರೌಡಿಶೀಟರ್ ಕೇಸ್ ಒಪನ್ ಮಾಡಬಾರದು. ನಮ್ಮ ನಾಡಿನ ಜನತೆಗಾಗಿ ಹೋರಾಟ ಮಾಡಿ ಪಡೆದುಕೊಳ್ಳುವುದು ಅವರ ಹಕ್ಕು. ಅವರ ಹಕ್ಕು ಬಾದ್ಯತೆಗಳನ್ನು ಕಸಿದುಕೊಳ್ಳುವಂತಿಲ್ಲ. ಬೇಕು ಬೇಕು ಎಂದು ಸುಮ್‌ಸುಮ್ನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವುದು ಸರಿಯಲ್ಲವೆಂದು ತಿಳಿಸಿದ್ದಾರೆ.
ಸಿದ್ದರಾಮಯ್ಯನವರದ್ದು ದ್ವಿಮುಖ ನೀತಿ ಎಂಬ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು ನಾನು ಹಿಂದೂ, ನನ್ನಪ್ಪ ನನ್ನಮ್ಮ ಕೂಡಾ ಹಿಂದುಗಳೇ ಯಾರೋ ಏನೋ ಹೇಳಿದ ಮಾತ್ರಕ್ಕೆ ನಾನು ಬೇರೆ ಧರ್ಮದವನಾಗುತ್ತಿನಾ? ಎಂದು ವಾಗ್ದಾಳಿ ನಡೆಸಿದ್ದಾರೆ.