ಬ್ರಾಹ್ಮಣರ ಬಗ್ಗೆ ನೀಡಿದ ಹೇಳಿಕೆಯ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಕುಮಾರಸ್ವಾಮಿಯವರ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಒಬ್ಬರಾದ ಮೇಲೊಬ್ಬರು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ಉಡುಪಿ ಶಾಸಕರಾದ ರಘುಪತಿಭಟ್ ಕೂಡಾ ಹೆಚ್ಡಿಕೆಯವರ ವಿರುದ್ದ ಕಿಡಿಕಾರಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಸಿಎಂ ಮಾಡುವುದರಲ್ಲೇನು ತಪ್ಪಿದೆ? ನಮ್ಮಪಕ್ಷದವರು ನಮ್ಮ ಹೈಕಮಾಂಡ್ ಜಾತಿ ಅಳೆದು ತೂಗಿ ಅದರ ಆಧಾರದ ಮೇಲೆ ಸಿಎಂ ಮಾಡುವುದಿಲ್ಲ. ಆದರೂ ಎಚ್.ಡಿ ಕುಮಾರಸ್ವಾಮಿ ಜಾತಿಯ ವಿಷಯವನ್ನು ತೆಗೆದಿದ್ದಾರೆ ಎಂದು ಹೇಳಿದ್ದಾರೆ.