ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿಯಾದ ಆಶಾ ರೋಡ್ರಿಗಸ್ ಎಂಬುವವರು ಮೃತಪಟ್ಟಿರುವುದು ತಿಳಿದುಬಂದಿದೆ.
ಬಜಪೆ ಪಡು ಪೆರಾರ ನಿವಾಸಿಯಾದ ಗ್ಲೋರಿಯಾ ಆಶಾ ರೋಡ್ರಿಗಸ್ ಒಂದು ವರ್ಷದ ಹಿಂದೆಯಷ್ಟೇ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿಯೇ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದು ಅದೇ ಕಾಲೇಜಿನಲ್ಲಿ ಬಿ.ಕಾಂ ಪದವಿದರರಿಗೆ ಕಾಮರ್ಸ್ ವಿಷಯಕ್ಕೆ ಉಪನ್ಯಾಸಕಿಯಾಗಿ ಸೇರಿಗೊಂಡಿದ್ದರು.
ನ.8ನೇ ತಾರೀಖಿನಂದು ಕಾಲೇಜಿನ ಮೆಟ್ಟಿಲು ಇಳಿಯುವ ವೇಳೆ ತಲೆಸುತ್ತು ಬಂದಿರುವ ಪರಿಣಾಮ ಮೆಟ್ಟಿಲ ಮೇಲೆ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆಸ್ಪತ್ರೆಗೆ ಹೋದನಂತರ ಪರೀಕ್ಷಿದ ನುರಿತ ವೈದ್ಯರ ತಂಡ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದ್ದಾರೆ.
ಮೃತಪಟ್ಟ ಆಶಾ ರೋಡ್ರಿಗಸ್ ತಮ್ಮ ಅಂಗಾಂಗಳಾದ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ನೀಡಲಾಗಿದೆ, ಕಣ್ಣು ಮತ್ತು ಚರ್ಮವನ್ನು ಪಾದರ್ ಮುಲ್ಲರ್ ಆಸ್ಪತ್ರೆಗೆ ನೀಡಲಾಗಿದೆ, ಯಕೃತ್‌ಅನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ನೀಡಲಾಗಿದೆ, ಎರಡು ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.