ಬೆಂಗಳೂರು: ಕಾಂಗ್ರೆಸ್ ಪಕ್ಷದ 50 ಶಾಸಕರಿಗೆ ಒಬ್ಬೊಬ್ಬರಿಗೆ ತಲಾ 50 ಕೋಟಿ ರೋಗಳ ಆಫರ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನು ಸಚಿವ ಸಂತೋಷ್ ಲಾಡ್ ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರದ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರ, ಕಾಂಗ್ರೆಸ್‌ನ 50 ಶಾಸಕರಿಗೆ 50ಕೋಟಿ ರೂಗಳ ಆಪರ್ ನೀಡಿದ್ದಾರೆಂಬ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯನವರು ಹೇಳಿದ್ದರು. ಆವರು ನೀಡಿರುವ ಹೇಳಿಕೆ ನೂರಕ್ಕೆ ನೂರು ಪರ್ಸೆಂಟ್ ಕರೆಕ್ಟ್.ಕೆಲವು ತಿಂಗಳಿನಿಂದ ಸರ್ಕಾರವನ್ನು ಅಸ್ಥಿರಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ.ನಮ್ಮ ಶಾಸಕರಿಗೆ ಆಪರ್ ಕೊಟ್ಟಿರುವ ಮಾಹಿತಿ ಲಭ್ಯವಾಗಿದೆ.ಸಿಎಂ ಸಿದ್ದರಾಮಯ್ಯನವರು ಹತ್ತಿರ ಮತ್ತಷ್ಟು ಹೆಚ್ಚಿನ ಮಾಹಿತಿ ಇದೆ.ನನ್ನ ಬಳಿಯೂ ಕೆಲವು ಶಾಸಕರು ಬಾಯಿಬಿಟ್ಟಿದ್ದಾರೆ.ಪ್ರಧಾನಿ ಮೋದಿ ಸಾಹೇಬರ ಕೈಯಲ್ಲಿ ಎಲ್ಲವೂ ಸಾದ್ಯವಾಗುತ್ತದೆ , ಏನ್ ಬೇಕಾದ್ರೂ ಮಾಡ್ತಾರೆ ಎಂದು ಕುಟುಕಿದ್ದಾರೆ.
ಮಹಾರಾಷ್ಟ್ರದ ಮಧುಯಪ್ರದೇಶದಲ್ಲಿ ಸರ್ಕಾರವನ್ನು ಉರುಳಿಸಿದ್ದಾರೆ. ನಮ್ಮ ಕರ್ನಾಟಕ ದೇಶದಲ್ಲಿಯೂ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.