ಬೆಂಗಳೂರು: ನಮ್ಮ ಪಕ್ಷದ ಶಾಸಕರಿಗೆ 50 ಕೋಟಿ ಆಪರ್‌ ನೀಡಿ ನಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರ ಆರೋಪ ಕುರಿತು ಡಿಸಿಎಂ ಡಿಕೆಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರದ ಕುರಿತು ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಅವರು, 50 ಜನ ಎಂ ಎಲ್‌ ಎ ಗಳಿಗೆ 50 ಕೋಟಿ ಆಪರ್‌ ನೀಡಿರುವುದು ನೂರಕ್ಕೆ ನೂರು ಸತ್ಯ. ಬಿಜೆಪಿಯವರು ಆಪರೇಷನ್‌ ಕಮಲದ ಬಗ್ಗೆ ನಮ್ಮ ಶಾಸಕರು ನಮ್ಮ ಬಳಿ ಮಾತನಾಡಿದ್ದಾರೆ.ಈ ವಿಚಾರವನ್ನು ಕೆಲವು ಶಾಸಕರು ಸಿಎಂಗೆ ವಿಷಯ ತಿಳಿಸಿದ್ದಾರೆ.ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.ಇನ್ನುಳಿದ ವಿಚಾರಗಳನ್ನು ನಂತರ ನಿಮಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ.ನಮ್ಮ ಪಕ್ಷದ ಎಲ್ಲಾ ಶಾಸಕರ ಜೊತೆಯಲ್ಲಿಯೂ ಮಾತನಾಡಿದ್ದಾರೆ.ಕೆಲವು ಶಾಸಕರು ನಮಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ.ನಂತರ ಅಪ್‌ಡೇಟ್ಸ್‌ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *