ಬೆಂಗಳೂರಿನಲ್ಲಿಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮ್ಯಾಚ್ ಶುರುವಾಗಬೇಕಿತ್ತು ಆದರೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ.ಅಕ್ಟೋಬರ್ 16ರಂದು 9ಗಂಟೆಗೆ ಟಾಸ್ ಆರಂಭವಾಗಬೇಕಿತ್ತು ಆದರೆ ಮಳೆಯಿಂದಾಗಿ ಸಾದ್ಯವಾಗಲಿಲ್ಲ.ಮಳೆ ಸ್ವಲ್ಪ ಕಡಿಮೆಯಾದರೂ ಅಂಪೈರ್‌ಗಳು ಮೈದಾನವನ್ನು ಪರಿಶೀಲಿಸಿ ಬರುತ್ತಿದ್ದರು.ಆಟವಾಡಲು ಸೂಕ್ತವಲ್ಲದ ಮೈದಾನವನ್ನು ಕಂಡ ಅಂಪೈರ್ಸ್ ಈ ದಿನದ ಆಟವನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಇಂದು ನಡೆಯಬೇಕಾಗಿದ್ದ ಆಟ ರದ್ದಾಗಿದ್ದು, ನಾಳೆಯಿಂದ ಆದರೂ ಆಟ ಶುರುವಾಗುತ್ತಾ ಎಂದು ಕಾದುಕುಳಿತಿರುವ ಅಭಿಮಾನಿಗಳು. ಆದರೆ ಹವಾಮಾನ ಮಾಹಿತಿ ಪ್ರಕಾರ ಅಕ್ಟೋಬರ್ 20ರವರೆಗೂ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ.