ಬೆಂಗಳೂರು: ಹೌದು ವೈದ್ಯರ ಮೇಲೆ ಹಲ್ಲೆ ಮಾಡುವ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 25.000ದಿಂದ 2 ಲಕ್ಷದವರೆಗೂ ದಂಡವನ್ನು ವಿಧಿಸುವ ಅವಕಾಶವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಾಹಿತಿಯ ಕುರಿತು ಮಾತನಾಡಿದ ಅವರು ದೇಶದಲ್ಲಿ ಇತ್ತೀಚೆಗೆ ವೈದ್ಯರ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೆದರಿಕೆ, ಹಲ್ಲೆಗಳ ಕುರಿತು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು ಈ ಹಿಂಸಾತ್ಮಕ ಘಟನೆಗಳ ವಿರುದ್ದ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ವೈದ್ಯರ ಮೇಲಿನ ದೌರ್ಜನ್ಯ, ಹಲ್ಲೆಗಳನ್ನು ತಡೆಗಟ್ಟಲು ಸರ್ಕಾರ ವಿಧಾನಮಂಡಲ ಅಧಿವೇಶನದ ವೇಳೆವೈದ್ಯಕೀಯ ನೋಂದಣಿ ಮತ್ತು ಕಾನೂನುಗಳಿಗೆ ತಿದ್ದುಪಡಿ ಮಾಡಿ ಕಾನೂನನ್ನು ಬಲಪಡಿಸಲಾಗಿದೆ ಎಂದಿದ್ದಾರೆ.
ವೈದ್ಯರ ಮೇಲಿನ ದೌರ್ಜನ್ಯಗಳು ನಡೆದರೆ ಅದಕ್ಕೆ ಅದಕ್ಕೆ ಕಠಿಣ ಕ್ರಮ ಕೈಗೊಂಡು ಶಿಕ್ಷಯನ್ನು ವಿಧಿಸಲಾಗುತ್ತದೆ . ಮತ್ತು ಸಾಮಾಜಿಕ ಜಾಲಾತಾಣದ ಮೂಲಕ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡುವವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.