ಬೆಂಗಳೂರು: ಟ್ಯಾಕ್ಸಿ ಮತ್ತು ಬೈಕುಗಳ ಸೇವೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಟ್ಯಾಕ್ಸಿ ಮತ್ತು ಬೈಕುಗಳಿಗೆ ಲೈಸೆನ್ಸ್ ನೀಡುವುದನ್ನು ಗೌವರ್ನಮೆಂಟ್ ನಿರಾಕರಿಸುವ ಹಾಗಿಲ್ಲ ಎಂದು ಹೈಕೋರ್ಟ್ ಸ್ಪಷ್ಟತೆ ನೀಡಿದೆ. ಟಾಕ್ಸಿ ಬೈಕುಗಳ ಸಂಸ್ಥೆಗಳು ನೀಡಿದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿಎಂ ಜೋಶಿ ವಿಭಾಗೀಯ ಪೀಠ ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ.
ಟ್ಯಾಕ್ಸಿ ಮತ್ತು ಬೈಕುಗಳ ಸಂಸ್ಥೆಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಅರ್ಜಿಗಳನ್ನು ಪರಿಗಣಿಸಿ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಟ್ಯಾಕ್ಸಿ ಮತ್ತು ಬೈಕುಗಳ ಸೇವೆಗಳು ಸಾರಿಗೆ ವ್ಯವಸ್ಥೆಯ ಭಾಗವಾಗಿದ್ದು, ಕಾನೂನು ಚೌಕಟ್ಟಿನಲ್ಲಿ ನಿರ್ಬಂಧಿಸುವಂತಿಲ್ಲ ಎಂದು ನ್ಯಾಯಾಲಯದ ಪೀಠ ಅಭಿಪ್ರಾಯಪಟ್ಟಿದೆ.
