ಅಹ್ಮದ್‌ ನಗರ: ಮುಸ್ಲೀಂ ಮಸೀದಿಯ ಒಳಗೆ ನುಗ್ಗಿ ಮುಸ್ಲಿಂರನ್ನು ಹುಡುಕಿ ಕೊಲ್ಲುತ್ತೇನೆ ಎಂದು ಬೆದರಿಕೆ ಮತ್ತು ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವ ಘಟನೆಯು ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ನಡೆದಿದ್ದು ಈ ಹೇಳಿಕೆಯನ್ನು ಬಿಜೆಪಿ ಶಾಸಕ ನಿತೀಶ್‌ ರಾಣೆ ನೀಡಿದ್ದಾರೆ ಎನ್ನಲಾಗಿದೆ.

ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು  ಉಂಟುಮಾಡಲಾಗಿದೆ ಎಂದು. ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಅವರ ವಿರುದ್ದ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ರೀತಿಯ ಉದ್ರೇಕಕಾರಿ ಹೇಳಿಕೆಯನ್ನು ನೀಡಿದ ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 302, 153 ಮತ್ತು ಇತರೆ ಸೆಕ್ಷನ್‌ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು ಎಐಎಂಐಎಂನ ನಾಯಕರಾದ ವಾರೀಶ್ ಪಠಾಣ್ರವರು ನಿತೀಶ್ ರಾಣೆ ಅವರ ವೀಡಿಯೊವನ್ನು ತಮ್ಮ  ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು  “ಬಿಜೆಪಿ ಸರ್ಕಾರವೂ ಚುನಾವಣೆಯ ಮುನ್ನ ಜನರ ನಡುವೆ ಕೋಮುಗಲಭೆಯನ್ನು ಸೃಷ್ಟಿಸಲು ಸಂಚು ಮಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ. ‌

Leave a Reply

Your email address will not be published. Required fields are marked *