ಕೋಲ್ಕತಾ :ಕೋಲ್ಕತಾ ಆರ್ ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವಂತಹ ಹೇಯ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದ್ದು ಇದನ್ನು ಖಂಡಿಸಿ ಪ್ರತಿಭಟನೆಗಳೂ ನಡೆಯುತ್ತಿದ್ದು ಹೆಣ್ಣು ಮಕ್ಕಳ ತಂಟೆಗೆ ಹೋಗ್ಬೇಡಿ ನಿಮ್ಮ ಕಾಮತೃಷೆಯನ್ನು ನಾವು ತೀರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರು ವಿಡಿಯೋ ವೈರಲ್ ಆಗಿದೆ.
ಅಮಾಯಕ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಕೋಲ್ಕತಾದ ಲೈಂಗಿಕ ಕಾರ್ಯಕರ್ತೆಯರೂ ಕೂಡಾ ಈ ಪೈಚಾಚಿಕ ವರ್ತನೆಗಳ ವಿರುದ್ಧ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಈ ವಿಷಯದ ಕುರಿತು ಮಾತನಾಡಿದ ಲೈಂಗಿಕ ಕಾರ್ಯಕರ್ತೆಯೊಬ್ಬರು, ಅತ್ಯಾಚಾರ ಒಂದು ಕ್ರೂರ ವರ್ತನೆ, ಅತ್ಯಾಚಾರ ಹೇಗೆ ತಡೆಯಬಹುದು?ನಿಮ್ಮ ಕಾಮತೃಷೆ ತೀರಿಸಲು ಎಷ್ಟು ದೊಡ್ಡ ರೆಡ್ ಲೈಟ್ ಏರಿಯಾ ಇದೆ. ನಿಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಬೇಕು ಎಂದಿದ್ದರೆ ಇಲ್ಲಗೆ ಬನ್ನಿ. 10 ರೂ, 20ರೂ,50ರೂ, ಕೊಟ್ಟು ನಿಮ್ಮ ಲೈಂಗಿಕ ಬಯಕೆ ತೀರಿಸಿಕೊಳ್ಳಿ. ಅದನ್ನು ಬಿಟ್ಟು ಅಮಾಯಕ ಹೆಣ್ಣುಮಕ್ಕಳನ್ನೇಕೆ ಕಾಡುತ್ತೀರಿ , ಆ ಮಕ್ಕಳ ತಂಟೆಗೆ ಹೋಗಬೇಡಿ ಹೆಣ್ಣುಮಕ್ಕಳನ್ನು ಬದುಕಲು ಬಿಡಿ ಅವರನ್ನು ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳಿ ಎಂದು ಹೇಳಿರುವ ಹೇಳಿಕೆಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.