ಬೆಂಗಳೂರು: ಶೀಘ್ರದಲ್ಲೇ ʼಕಾವೇರಿʼ ನೀರಿನ ದರವನ್ನು ಹೆಚ್ಚಿಸಲಾಗುವುದು ಎಂದು ಬೆಂಗಳೂರಿಗರಿಗೆ ಶಾಕ್ ಕೊಟ್ಟ ಸರ್ಕಾರ.
ಈ ವಿಷಯದ ಕುರಿತು ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ನೀರಿನ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಕಾವೇರಿ ನೀರಿನ ದರವನ್ನು ಹೆಚ್ಚಿಸುವುದರ ಬಗ್ಗೆ ಸದ್ಯದಲ್ಲೇ ಕ್ರಮವನ್ನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಜಲಮಂಡಳಿ ನಷ್ಟದಲ್ಲಿದ್ದು ನೌಕರರಿಗೆ ಸಂಬಳ ಕೊಡಲು ಹಾಗೂ ವಿದ್ಯುತ್ ಬಿಲ್ ಪಾವತಿಸಲು ಸಾದ್ಯವಾಗುತ್ತಿಲ್ಲ ಆದ್ದರಿಂದ ಕಮಿಟಿ ಸಭೆ ಮತ್ತು ಕ್ಯಾಬಿನೆಟ್ನಲ್ಲಿ ಎಷ್ಟು ಬೆಲೆ ನಿಗದಿಮಾಡಬೇಕು ಎಂಬುದನ್ನು ಚರ್ಚೆ ನಡೆಸಿ ತಿಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.